ಮಂಜುನಾಥ್ ಶೆಟ್ಟಿ…

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಗೆ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಮತದಾರರು ಅಗತ್ಯ ಮಾಹಿತಿಯನ್ನು ಬಿಎಲ್‌ಓ ಗಳಿಗೆ ನೀಡಿ ಸಹಕರಿಸಬೇಕೆಂದು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಕೋರಿದ್ದಾರೆ.


ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 2002 ರ ಮತದಾರರ ಪಟ್ಟಿಯನ್ನು 2025 ರ ಪರಿಷ್ಕೃತ ಮತದಾರರ ಪಟ್ಟಿಗೆ ಮ್ಯಾಪಿಂಗ್ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು ಈ ಪ್ರಕ್ರಿಯೆಯು ಪ್ರತಿಯೊಬ್ಬ ಮತದಾರರಿಗೂ ಅತಿ ಮಹತ್ವದ್ದಾಗಿದೆ.
ಕಳೆದ 20 ವರ್ಷಗಳ ಸುಧೀರ್ಘ ಅವಧಿಯಲ್ಲಿ ಅತೀ ದೊಡ್ಡ ಪ್ರಮಾಣದಲ್ಲಿ ಸೇರ್ಪಡೆಗಳು ಮತ್ತು ಬಿಟ್ಟುಬಿಡುವಿಕೆಗಳ ಕಾರಣದಿಂದಾಗಿ ಮತದಾರರ ಪಟ್ಟಿಯಲ್ಲಿ ಗಮನಾರ್ಹ ಬದಲಾವಣೆಯಾಗಿರುವುದು ಆಯೋಗದ ಗಮನಕ್ಕೆ ಬಂದಿರುವುದರಿAದ, ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಗಳನ್ನು ವಿಶೇಷ ಸಮಗ್ರ ಪರಿಷ್ಕರಣೆಯ ಅಡಿಯಲ್ಲಿ ಮಾನ್ಯ ಭಾರತ ಚುನಾವಣಾ ಆಯೋಗ, ನವದೆಹಲಿ ಇವರ ಆದೇಶ ಸಂಖ್ಯೆ:23/ಇಆರ್ ಎಸ್/ 2025, ದಿನಾಂಕ:24.06.2025 ರನ್ವಯ ಮಾನ್ಯ ಆಯೋಗವು ಮತದಾರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಯನ್ನು ಗೊತ್ತುಪಡಿಸಿರುತ್ತದೆ.
ಈ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಮತದಾರರ ಪಟ್ಟಿಯಿಂದ ಯಾವುದೇ ಮತದಾರರ ಹೆಸರುಗಳನ್ನು ತೆಗೆದು ಹಾಕುವ ಅಥವಾ ಸೇರ್ಪಡೆ ಮಾಡುವ ಕಾರ್ಯವನ್ನು ಜರುಗಿಸಲಾಗುತ್ತಿಲ್ಲ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸಲಾಗಿದೆ.
ಈ ವಿಶೇಷ ಸಮಗ್ರ ಪರಿಷ್ಕರಣೆಯ ಪೂರ್ವದಲ್ಲಿ ಅರ್ಹ ಮತದಾರರು ಗಮನ ಹರಿಸಬೇಕಾದಂತಹ ಅಂಶಗಳು ಈ ಕೆಳಗಿನಂತಿವೆ :

  • ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ಜರುಗಿಸುವ ಕುರಿತು ಪೂರ್ವ ಸಿದ್ಧತೆಗೆ 2025ರ ಮತದಾರರ ಯಾದಿಯಲ್ಲಿ ನೋಂದಣಿಯಾದ ಮತದಾರರನ್ನು 2002ರ ಪಟ್ಟಿಗೆ ತಾಳೆ(ಮ್ಯಾಪಿಂಗ್) ಮಾಡುವ ಕಾರ್ಯ ಕೈಗೊಳ್ಳಲಾಗಿರುತ್ತದೆ. ಮ್ಯಾಪಿಂಗ್ ಅಂದರೆ 2002ರ ಮತದಾರರ ಪಟ್ಟಿಯನ್ನು 2025ರ ಮತದಾರರ ಪಟ್ಟಿಗೆ ಜೋಡಣೆ ಮಾಡುವುದು. ಪ್ರೊಜೆನಿ ಮ್ಯಾಪಿಂಗ್ ಅಂದರೆ 2002ರ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರುಗಳು ನೋಂದಣಿಯಾಗದಿದ್ದಲ್ಲಿ ಅವರ ತಂದೆ ತಾಯಿಯವರ ಭಾಗ ಸಂಖ್ಯೆ ಹಾಗೂ ಕ್ರಮ ಸಂಖ್ಯೆ ಅಥವಾ ಅಜ್ಜ ಅಜ್ಜಿಯರ ಭಾಗಸಂಖ್ಯೆ ಹಾಗೂ ಕ್ರಮ ಸಂಖ್ಯೆಯೊAದಿಗೆ (ಯಾವುದಾದರೂ ಸಂಬAಧಿಸಿದ) ಜೋಡಣೆ ಮಾಡಿಕೊಳ್ಳುವುದು.
  • ಶಿವಮೊಗ್ಗ ಜಿಲ್ಲೆಯಲ್ಲಿ 111-ಶಿವಮೊಗ್ಗ, ಗ್ರಾಮಾಂತರ, 112- ಭದ್ರಾವತಿ, 113-ಶಿವಮೊಗ್ಗ ನಗರ, 114 ತೀರ್ಥಹಳ್ಳಿ 115-ಶಿಕಾರಿಪುರ 116-ಸೊರಬ ಮತ್ತು 117- ಸಾಗರ ಒಟ್ಟು 07 ವಿಧಾನ ಸಭಾ ಕ್ಷೇತ್ರಗಳಿದ್ದು 1530471 ಮತದಾರರಿದ್ದಾರೆ. ಈ ಪೈಕಿ ಮ್ಯಾಪಿಂಗ್ ಹಾಗೂ ಪ್ರೊಜೆನಿ (ಸಂತತಿ)ಯನ್ನು ಸೇರಿಸಿದಂತೆ ಶೇಕಡ 67.36 ಪ್ರಗತಿಯಾಗಿದ್ದು ಇನ್ನು ಶೇ 32.64 ರಷ್ಟು ಪ್ರಗತಿಯನ್ನು ಸಾಧಿಸಬೇಕಾಗಿದೆ.
  • ಮತದಾರರು ಕೂಡಲೇ ತಮ್ಮ ತಮ್ಮ ಮತಗಟ್ಟೆಗಳ ಅಧಿಕಾರಿ(ಬಿಎಲ್‌ಓ)ಗಳನ್ನು ಭೇಟಿ ಮಾಡಿ 2002ರ ಮತದಾರರ ಪಟ್ಟಿಗೆ 2025ರ ಮತಾರರ ಪಟ್ಟಿಯನ್ನು ಮ್ಯಾಪಿಂಗ್ ಮಾಡಿಕೊಳ್ಳುವುದು. ಹಾಗೂ 2002 ರಲ್ಲಿ ಹೊರ ರಾಜ್ಯದಲ್ಲಿ ವಾಸವಿದ್ದ ಮತದಾರರು ಪ್ರಸ್ತುತ 2025ರಲ್ಲಿ ಕರ್ನಾಟಕದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಯಾಗಿದ್ದಲ್ಲಿ ಅಂತಹ ಮತದಾರರಿಗೂ ಸಹ ಮ್ಯಾಪಿಂಗ್ ಮಾಡಿಕೊಳ್ಳಲು ಭಾರತ ಚುನಾವಣಾ ಆಯೋಗದಿಂದ ಅವಕಾಶ ನೀಡಲಾಗಿರುತ್ತದೆ.
  • 2002ರ ನಂತರ ಮದುವೆಯಾಗಿ ಬಂದಿರುವವರು ಅಥವಾ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಲಸೆ (ಸ್ಥಳಾಂತರ) ಗೊಂಡಿರುವವರು ಅಥವಾ ಹೊಸದಾಗಿ ಅರ್ಹತೆ ಪಡೆದಿರುವವರು ನಿಮ್ಮ ಮ್ಯಾಪಿಂಗ್ ಕಾರ್ಯವನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಹಾಗೂ ನೀವು ಈ ಹಿಂದೆ ವಾಸವಿದ್ದಂತಹ ತಮ್ಮ ಹಿಂದಿನ ವಿಧಾನಸಭಾ ಕ್ಷೇತ್ರದ ಸಂಖ್ಯೆ ಭಾಗ ಸಂಖ್ಯೆ ಹಾಗೂ ತಮ್ಮ ಕ್ರಮ ಸಂಖ್ಯೆ ತಿಳಿದುಕೊಂಡು ಕೂಡಲೇ ಬಿಎಲ್‌ಓ ಗೆ ವರದಿ ನೀಡುವುದು.
  • ಒಂದು ವೇಳೆ 2002ರ ಪಟ್ಟಿಯಲ್ಲಿ ನಿಮ್ಮಗಳ ಹೆಸರುಗಳು ಇಲ್ಲದಿದ್ದಲ್ಲಿ ನಿಮ್ಮಗಳ ತಂದೆ ತಾಯಿಯವರ ಭಾಗ ಸಂಖ್ಯೆ( ಪಾರ್ಟ್ ನಂ.)ಹಾಗೂ ಕ್ರಮ ಸಂಖ್ಯೆ(ಸೀರಿಯಲ್ ನಂ.)ಅಥವಾ ಅಜ್ಜ ಅಜ್ಜಿಯರ ಭಾಗ ಸಂಖ್ಯೆ ಹಾಗೂ ಕ್ರಮ ಸಂಖ್ಯೆಯೊAದಿಗೆ (ಯಾವುದಾದರು ಸಂಬAಧಿಸಿದ) ಮಾಹಿತಿಯನ್ನು ಬಿಎಲ್‌ಓ ರವರಿಗೆ ಒದಗಿಸಿ ಮ್ಯಾಪಿಂಗ್ ಮಾಡಿಸಿಕೊಳ್ಳುವುದು.

ಮತದಾರರು ಮೇಲ್ಕಂಡ ಎಲ್ಲಾ ಮಾಹಿತಿಯನ್ನು ತಮ್ಮ ಪ್ರದೇಶದ ಬಿಎಲ್‌ಓ ಗಳಿಗೆ ತಕ್ಷಣವೇ ಒಪ್ಪಿಸಿ ಅವರ ಮುಖಾಂತರ ಕಡ್ಡಾಯವಾಗಿ ಮ್ಯಾಪಿಂಗ್ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಕೋರಿದ್ದಾರೆ.

Leave a Reply

Your email address will not be published. Required fields are marked *