ಮಂಜುನಾಥ್ ಶೆಟ್ಟಿ…
ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆ ಮತ್ತು ಮಹಿಳಾ ಸಬಲೀಕರಣವಾಗಿದೆ ಜೊತೆಗೆ ಬಡವರನ್ನು ಮುಖ್ಯವಾಹಿನಿಗೆ ತರುವ ಕೆಲಸವಾಗುತ್ತಿದೆ ಎಂದು ಶಾಲಾ ಶಿಕ್ಷಣಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪ ನುಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಆಹಾರ ಮತ್ತು ನಾಗರೀಕ ಇಲಾಖೆ, ಇಂಧನ ಇಲಾಖೆ, ಸಾರಿಗೆ ಇಲಾಖೆ, ಉದ್ಯೋಗ ವಿನಿಮಯ ಇಲಾಖೆ, ಕೌಶಲ್ಯಾಭಿವೃದ್ದಿ ಇಲಾಖೆ, ಜಿಲ್ಲಾ/ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಕುವೆಂಪು ರಂಗಮAದಿರದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಕುರಿತಾದ ಪಂಚ ಗ್ಯಾರಂಟಿ ಯೋಜನೆಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರ್ಕಾರ ರೈತರ ಹಿಂದುಳಿದವರ, ಬಡವರ ಮತ್ತು ಮಹಿಳೆಯರ ಪರವಾಗಿದ್ದು, ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ಜನರ ಬಳಿ ದುಡ್ಡು ಬಂದು ಖರ್ಚು ಸಹ ಹೆಚ್ಚಾಗಿದೆ. ಇದರಿಂದ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಆದಾಯ ಬರುತ್ತದೆ.
ಶಕ್ತಿ ಮತ್ತು ಗೃಹಲಕ್ಷಿö್ಮ ಯೋಜನೆಗಳಿಂದ ಮಹಿಳೆಯರು ಸ್ವಾವಲಂಬಿಗಳಾಗಿ, ಖರ್ಚು ಮಾಡಿದ್ದಾರೆ. ಇದರಿಂದ ದೇವಸ್ಥಾನದ ಆದಾಯ ಕೂಡ ಹೆಚ್ಚಿದೆ. ಗೃಹಜ್ಯೋತಿಯಿಂದ ಓದುವ ಮಕ್ಕಳಿಗೆ ಬಹಳ ಅನುಕೂಲವಾಗಿದೆ. ರಾಜ್ಯದ ಆರ್ಥಿಕ ವ್ಯವಸ್ಥೆ ಸರಿಪಡಿಸಲು ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿದ್ದು ಗ್ಯಾರಂಟಿ ಪ್ರಾಧಿಕಾರ ಕ್ಯಾಬಿನೆಟ್‌ಗಿಂತ ಉತ್ತಮ ಕೆಲಸ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳ ಅನುಕೂಲಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕಿದೆ. ಈ ನಿಟ್ಟಿನಲ್ಲಿ ಕಾರ್ಯಾಗಾರ ಉಪಯುಕ್ತವಾಗಿದೆ ಎಂದರು.
ನಾವು ಚೆನ್ನಾಗಿರಬೇಕೆಂದರೆ ಬ್ಲಡ್ ಮತ್ತು ದುಡ್ಡು ಬೇಕು. ಸರ್ಕಾರ ಮತ್ತು ಮಾರುಕಟ್ಟೆ ಚೆನ್ನಾಗಿರಬೇಕಾದರೆ ಮಹಿಳಾ ಸಬಲೀಕರಣ ಆಗಬೇಕು. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ರೂ. 1,13,000 ಕೋಟಿ ಹಣವು ನೇರವಾಗಿ ಬಡವರ ಖಾತೆಗೆ ತಲುಪಿದೆ. ಹಾಗೂ ನಮ್ಮ ಜಿಲ್ಲೆಯಲ್ಲಿ ರೂ.3023 .95 ಕೋಟಿ ಫಲಾನುಭವಿಗಳಿಗೆ ತಲುಪಿದೆ.
ಎಸ್.ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವರು…
ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಂ ರೇವಣ್ಣ ಮಾತನಾಡಿ, ಎಲ್ಲ ಮುಖ್ಯಮಂತ್ರಿಗಳು ಜನರ ಉದ್ದಾರಕ್ಕಾಗಿ ಹಲವಾರು ಕಲ್ಯಾಣ ಯೋಜನೆಗಳನ್ನು ನೀಡಿದ್ದಾರೆ. ದೇವರಾಜ ಅರಸು, ಗುಂಡೂರಾವ್, ಬಂಗಾರಪ್ಪ, ವೀರಪ್ಪ ಮೊಯ್ಲಿ, ಎಸ್.ಎಂ.ಕೃಷ್ಣ ಸೇರಿದಂತೆ ಸಿದ್ದರಾಮಯ್ಯನವರು ರಾಜ್ಯದಲ್ಲಿ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಬಸವಣ್ಣನವರ ತತ್ವದ ಆಧಾರದಲ್ಲಿ ಅಧಿಕಾರ ನಡೆಸಿ ರೈತರಿಗೆ, ಜನರಿಗೆ, ವಿದ್ಯಾರ್ಥಿಗಳಿಗೆ ಅತ್ಯುತ್ತಮ ಯೋಜನೆಗಳನ್ನು ನೀಡಿದ್ದಾರೆ.
ಸಿದ್ದರಾಮಯ್ಯನವರು ನೀಡಿದ್ದ 165 ಭರವಸೆಗಳನ್ನು ಈಡೇರಿಸಿದ್ದಾರೆ.
ರಾಜ್ಯದ ಆರ್ಥಿಕ ಪರಿಸ್ಥಿತಿ ಚೇತರಿಕೆ ಕಂಡಿದೆ. ತಲಾ ಆದಾಯ ಮತ್ತು ಜಿಎಸ್‌ಟಿ ಯಲ್ಲಿ ರಾಜ್ಯ ಮೊದಲನೇ ಸ್ಥಾನದಲ್ಲಿದೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ನಷ್ಟವೇನೂ ಆಗಿಲ್ಲ. ಲಾಭವೇ ಆಗುತ್ತಿದೆ. ಇದೀಗ ಎಲ್ಲ ರಾಜ್ಯಗಳಲ್ಲಿ ನಮ್ಮಂತೆ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದ್ದಾರೆ ಎಂದರು.
ಈ ಕಾರ್ಯಾಗಾರದಿಂದ ಗ್ಯಾರಂಟಿ ಯೋಜನೆಗಳ ಕುರಿತಾದ ಮಾಹಿತಿ ಅರ್ಥಪೂರ್ಣವಾಗಿ ದೊರಕಿದೆ. ಜಿಲ್ಲೆಯು ಗ್ಯಾರಂಟಿ ಯೋಜನೆಗಳ ಅನುಷ್ಟಾನದಲ್ಲಿ ಶೇ.98 ಪ್ರಗತಿ ಸಾಧಿಸಿದೆ.
ಯುವನಿಧಿ ಯೋಜನೆಯಡಿ ನಮ್ಮ ಸದಸ್ಯರೇ ಮುಂದೆ ಹೋಗಿ ನೋಂದಣಿ ಮಾಡಿಸಬೇಕು ಎಂದು ಸೂಚಿಸಿದ ಅವರು ಗೃಹಲಕ್ಷಿö್ಮ ಯೋಜನೆಗೆ ಸಂಬAಧಿಸಿAದAತೆ ಜಿಎಸ್‌ಟಿ ಬಗ್ಗೆ ಸಭೆ ನಡೆಸಲಾಗಿದೆ. ಜಿಎಸ್‌ಟಿ ಯಿಂದಾಗಿ ಯೋಜನೆಯ ಫಲ ಸ್ಥಗಿತವಾಗಿದ್ದ 60 ಸಾವಿರ ಅರ್ಜಿ ವಿಲೇವಾರಿ ಆಗಿದ್ದು ಉಳಿದ 60 ಸಾವಿರ ಅರ್ಜಿಗಳನ್ನು ಕ್ಲಿಯರ್ ಮಾಡುತ್ತೇವೆ. ಗೃಹಲಕ್ಷಿö್ಮ ಯೋಜನೆಯಡಿ ರಾಜ್ಯದಲ್ಲಿ ಮರಣ ಹೊಂದಿದ 1,44,056 ಜನರಿಗೆ ಹಣ ಸಂದಾಯವಾಗಿದ್ದು, ಇದನ್ನು ಸರಿಪಡಿಸಲು ಕ್ರಮ ವಹಿಸಲಾಗುತ್ತಿದೆ.
ರಾಜ್ಯದಲ್ಲಿ ಈವರೆಗೆ 600 ಕೋಟಿ ಬಾರಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ನಿರ್ಮಿಸಲಾಗಿದೆ. ಇನ್ನು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಜನರ ದಟ್ಟಣೆ ತಗ್ಗಿಸಲು ಹೊಸದಾಗಿ 3000 ಬಸ್ ಖರೀದಿಸಲಾಗಿದೆ, ನೇಮಕಾತಿಯನ್ನೂ ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ ಕೋವಿಡ್ ಸಮಯದಲ್ಲಿ ಸ್ಥಗಿತಗೊಂಡಿದ್ದ ಬಸ್ ಗಳ ಓಡಾಟ ರಿಶೆಡ್ಯೂಲ್ ಮಾಡಲಾಗುವುದು ಎಂದ ಅವರು ಗ್ಯಾರಂಟಿ ಯೋಜನೆಗಳನ್ನು ಇನ್ನೂ ಯಶಸ್ವಿಗೊಳಿಸಲು ನಮ್ಮ ತಂಡ ಶ್ರಮಿಸಲಿದೆ ಎಂದರು.
ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಶಾಸಕರಾದ ದಿನೇಶ್ ಗೂಳಿಗೌಡ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಅತ್ಯಂತ ಯಶಸ್ವಿಯಾಗಿ ಜಾರಿಯಾಗಿವೆ. ಬಜೆಟ್‌ನಲ್ಲಿ ಗ್ಯಾರಂಟಿಯೋಜನೆಗಳಿಗಾಗಿ ರೂ 4.968 ಕೋಟಿ ಹಣವನ್ನು ಮೀಸಲು ಇಡಲಾಗಿದ್ದು ಈವರೆಗೆ ರೂ. 1,13,000 ಕೋಟಿ ಹಣ ಜನ ಸಾಮಾನ್ಯರ ಖಾತೆಗೆ ಜಮೆ ಮಾಡಲಾಗಿದೆ. ರೂ. 1.25 ಸಾವಿರ ಕೋಟಿ ಹಣವನ್ನು ಅಭಿವೃದ್ಧಿ ಕಾಮಗಾರಿಗಳಿಗಾಗಿ ಮೀಸಲಿಡಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳು ಶೇ. 98 ಪ್ರಗತಿಯಲ್ಲಿದ್ದು ಈ ಯೋಜನೆಗಳು ಮಹಿಳೆಯರು, ರೈತರು, ಬಡವರರು, ಹಿಂದುಳಿದವರ ಪರವಾಗಿದೆ. ಕೇವಲ ಗ್ಯಾರಂಟಿ ಯೋಜನೆಗಳಲ್ಲದೇ ಇತರೆ ಅಭಿವೃದ್ದಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಕಾಲ ಕಾಲಕ್ಕೆ ಗೊಬ್ಬರ, ಬಿತ್ತನೆ ಬೀಜ ದೊರಕುತ್ತಿದ್ದು ರಾಜ್ಯಾದ್ಯಂತ ಅಭಿವೃದ್ದಿ ಆಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪ ಅಮರನಾಥ್ ಮಾತನಾಡಿ, ರಾಜ್ಯ ಸರ್ಕಾರ ಹೆಣ್ಣು ಮಕ್ಕಳಿಗೆ ಗ್ಯಾರಂಟಿ ನೀಡಿದೆ. ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ರೂಪಿಸಿರುವ ಯೋಜನೆ ಇದಾಗಿದೆ. ಜಾತ್ಯಾತೀತ, ಪಕ್ಷಾತೀತ, ಧರ್ಮಾತೀತವಾದ ಯೋಜನೆಗಳು ಇವಾಗಿದ್ದು, ಆರ್ಥಿಕವಾಗಿ, ಸಾಮಾಜಿವಾಗಿ ಸಮಾನತೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ ಎಂದರು.
ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು ಮಾತನಾಡಿ, ಮಹಿಳೆಯರ ಆರ್ಥಿಕ, ಸಾಮಾಜಿಕ ಸಬಲೀಕರಣಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ನೀಡುತ್ತೇವೆಂದು ನೀಡಲಾದ ಭರವಸೆಯನ್ನು ರಾಜ್ಯ ಸರ್ಕಾರ ಈಡೇರಿಸಿದ್ದು, ಮಹಿಳಾ ಸಬಲೀಕರಣ ಸಾಧ್ಯವಾಗಿದೆ. ವಿಶೇಷವಾಗಿ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡಲಾಗಿದೆ. ಮಹಿಳೆಯರು ಈ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಸ್ವಾವಲಂಬಿಗಳಾಗಿದ್ದಾರೆ. ಜೊತೆಗೆ ಉದ್ಯಮಿಗಳು ಉದ್ಯಮಿಗಳಾಗಬೇಕು ಎಂದರು.
ಸAಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಡಾ.ವಾಸು ಹೆಚ್ ಪಿ ಮಾತನಾಡಿ, ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಗ್ಯಾರಂಟಿಗಳೇ ಕಾರಣ. ರೂ. 1,13,000 ಕೋಟಿ ಹಣವನ್ನು ಜನ ಸಾಮಾನ್ಯರಿಗೆ ಈ ಯೋಜನೆಗಳು ತಲುಪಿಸಿದ್ದು, ಗ್ಯಾರಂಟಿ ಯೋಜನೆಗಳು 2019 ರಲ್ಲಿ ನ್ಯಾಯ್ ಎಂಬ ಯೋಜನೆಯಡಿಯ ಪರಿಕಲ್ಪನೆಯಾಗಿದೆ.
ಗ್ಯಾರಂಟಿ ಯೋಜನೆಗಳಿಂದ ನಷ್ಟ, ಮಹಿಳೆಯರ ವೋಟ್‌ಗಾಗಿ ಮಾಡಲಾಗಿದೆ ಇನ್ನಿತರೆ ಅಪಪ್ರಚಾರ ಮಾಡಲಾಗಿತ್ತು. ಆದರೆ ಅದು ಸತ್ಯವಲ್ಲ. ಅರ್ಥಶಾಸ್ತ್ರಜ್ಞರು ದೇಶದ/ರಾಜ್ಯದ ಅಭಿವೃದ್ದಿಯಾಗಬೇಕಾದರೆ ಜನ ಸಾಮಾನ್ಯರಿಗೆ ನೀವು ಯಾವುದಾದರೂ ರಿತಿಯಲ್ಲಿ ಹಣ ಕೊಡಬೇಕೆಂದು ಹೇಳಿದ್ದಾರೆ. ನರೇಗಾ ಅಥವಾ ಸಮುದಾಯದ ಜನರಿಗೆ ಉದ್ಯೋಗ ನೀಡಬೇಕು. ಹಾಗೂ ಸಾರ್ವತ್ರಿಕ ಕನಿಷ್ಟ ಆದಾಯದಿಂದ ಅಭಿವೃದ್ಧಿ ಸಾಧ್ಯವೆಂದು ಹೇಳಿದ್ದಾರೆ.
ಹಣ ಕೊಡುವುದರಿಂದ ಕೊಳ್ಳುವ ಶಕ್ತಿ ಹೆಚ್ಚಿಗೆಯಾಗಿ, ಘನತೆ, ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗುತ್ತದೆ. ಇದನ್ನು ಗ್ಯಾರಂಟಿ ಯೋಜನೆಗಳು ಸಾಧ್ಯವಾಗಿಸಿದ್ದು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿದೆ. ಜನರ ತೆರಿಗೆಯಿಂದ ಸರ್ಕಾರಕ್ಕೆ ಆದಾಯ ಬರುತ್ತದೆ. ಗ್ಯಾರಂಟಿ ಯಿಂದ ಬಂದ ಹಣವನ್ನು ಖರ್ಚು ಮಾಡುತ್ತಾರೆ. ಖರೀದಿ ಹೆಚ್ಚಾದಂತೆ ಉತ್ಪಾದನೆ ಸಹ ಹೆಚ್ಚುತ್ತದೆ.
ಗ್ಯಾರಂಟಿ ಯೋಜನೆಳಿಂದಾಗಿ ಜನರಲ್ಲಿ ಕೊಳ್ಳುವ ಶಕ್ತಿ ಹೆಚ್ಚಿದೆ. ಜಿಎಸ್‌ಟಿಗೆ ಉತ್ತಮ ಕೊಡುಗೆ ನೀಡಿದೆ. ರಾಜ್ಯದ ತಲಾದಾಯ ರೂ. 2.4 ಲಕ್ಷ ಆಗಿದೆ(ದೇಶದ ತಲಾ ಆದಾಯ 1.14 ಲಕ್ಷ ). ಜಿಎಸ್ಟಿ ಬೆಳವಣಿಗೆ ದರ ಸಾಕಷ್ಟು ಹೆಚ್ಚಿದೆ.
ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ನಷ್ಟದಲ್ಲಿ ಇಲ್ಲ. ಸಕಾಲದಲಿ ್ಲಸರ್ಕಾರಿ ನೌಕರರಿಗೆ ಸಂಬಳ ನೀಡಲಾಗುತ್ತಿದೆ. ಇತರೆ ಹಲವಾರು ಅಭಿವೃದ್ದಿ ಯೋಜನೆಗಳು, ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಮೊದಲ ವರ್ಷಗಳಲ್ಲಿ ಗ್ಯಾರಂಟಿ ಅನುಷ್ಟಾನದಿಂದ ಕಷ್ಟ ಆಗುತ್ತದೆ. ಆದರೆ ನಂತರ ತೆರಿಗೆ ಹಣವೇ ಅಭಿವೃದ್ಧಿಗೆ ಚಾಲಕ ಶಕ್ತಿಯಾಗುತ್ತದೆ. ಈ ಯೋಜನೆಗಳಿಂದ ಜನರು ಸೋಮಾರಿಗಳಲ್ಲ, ಬದಲಾಗಿ ಅವರಲ್ಲಿ ಉದ್ಯೋಗಶೀಲತೆ ಹೆಚ್ಚುತ್ತದೆ.
ಹೆಚ್ಚು ಗ್ಯಾರಂಟಿಗಳಿರುವ ತಮಿಳುನಾಡಿನಲ್ಲಿ ಶೇ.43 ಮಹಿಳೆಯರು ದುಡಿಯುತ್ತಿದ್ದರೆ ದೇಶದಲ್ಲಿ ಶೇ.31 ಮಹಿಳೆಯರು ದುಡಿಯುತ್ತಿದ್ದಾರೆ. ಮಹಿಳೆಗೆ ಯಾಕೆ ಹೆಚ್ಚು ಯೋಜನೆಳೆಂದರೆ ಅವರ ಉದ್ಯಮಶೀಲತೆ ಪುರುಷರಿಗಿಂತ ಹೆಚ್ಚಿದೆ. ಗೃಹಲಕ್ಷಿö್ಮ ಹಣ ವೇತನವಿಲ್ಲದೆ ದುಡಿಯುತ್ತಿರುವ ಮಹಿಳೆಯರಿಗೆ ನೀಡುತ್ತಿರುವ ಆದಾಯವಾಗಿದೆ ಗ್ಯಾರಂಟಿ ಬಿಟ್ಟಿ ಅಲ್ಲ, ಅದು ದಾಸೋಹ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಮಾತನಾಡಿ, ನಾವು ಸರ್ಕಾರದ ಯಾವುದೇ ಯೋಜನೆಗಳನ್ನು ವಿರೋಧ ಮಾಡಿಲ್ಲ. ಆದರೆ ಬಜೆಟ್‌ನಲ್ಲಿರುವ ಯೋಜನೆಗಳು ಜಾರಿಗೆ ಬರಬೇಕೆಂದು ಆಗ್ರಹಿಸಿದ್ದೆವು. ಯೋಜನೆಗಳು ಜನರಿಗೆ ಪೂರಕವಾಗಿರಬೇಕು ಎಂದ ಅವರು ಈ ಕಾರ್ಯಾಗಾರ ಒಂದು ಅವಲೋಕನ ಕಾರ್ಯಕ್ರಮವಾಗಿದ್ದು ಯೋಜನೆಯಲ್ಲಿನ ಕೊರತೆಗಳ ಕಡೆಯೂ ಗಮನ ಹರಿಸಬೇಕು ಎಂದರು.
ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ನೋಂದಣಿ ಕಡಿಮೆ ಇದೆ. ಹಾಗೂ 2022-23 ರಲ್ಲಿ ಪದವಿ/ಡಿಪ್ಲೊಮ ಮುಗಿಸಿದವರಿಗೆ ಮಾತ್ರ ಅವಕಾಶ ನೀಡಿದ್ದು ಉಳಿದವರು ವಂಚಿತರಾಗುತ್ತಾರೆ. ಭತ್ಯೆ ಸಮಯವನ್ನು 2 ವರ್ಷಕ್ಕಿಂತ ಹೆಚ್ಚಿಸಬೇಕು. ಶಕ್ತಿ ಯೋಜನೆಯಿಂದಾಗಿ ಬಸ್ ಸಂಚಾರ ಪ್ರಮಾಣ ಇಳಿಕೆಯಾಗಿದೆ. ಜನದಟ್ಟಣೆಯಿಂದಾಗಿ ಅಸುರಕ್ಷಿತ ಪ್ರಯಾಣ ಉಂಟಾಗಿದೆ. ಬಿಪಿಎಲ್ ನಿಂದ ಎಪಿಎಲ್ ಆಗುತ್ತಿರುವ ಬಗ್ಗೆ ಯೋಚಿಸಬೇಕಿದ್ದು ಜಿಲ್ಲೆಯಲ್ಲಿ 1700 ಜನ ಎಪಿಎಲ್‌ಗೆ ಬಂದಿದ್ದು ಈ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೊಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಸಿ ಎಸ್ ಚಂದ್ರಭೂಪಾಲ ಸ್ವಾಗತಿಸಿದರು.
ಫಲಾನುಭವಿಗಳ ಅನಿಸಿಕೆ…
ಭದ್ರಾವತಿಯ ಶಾಲಿನಿ ಶಕ್ತಿ ಯೋಜನೆ ಬಗ್ಗೆ ಮಾತನಾಡಿ, ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಹೊಸ ಶಕ್ತಿ ಬಂದಿದೆ. ನಾವು ಮನೆಯ ಪುರುಷರ ಮೇಲೆ ಅವಲಂಬಿತರಾಗದೇ ಎಲ್ಲೆಡೆ ಉಚಿತವಾಗಿ ಓಡಾಡಲು ಸಾಧ್ಯವಾಗಿದೆ. ಪುಣ್ಯಕ್ಷೇತ್ರಗಳ ದರ್ಶನ ಮಾಡಲು ಸಾಧ್ಯವಾಗಿದ್ದು ತುಂಬಾ ಅನುಕೂಲವಾಗಿದೆ ಎಂದರು.
ಗಾಡಿಕೊಪ್ಪದ ಕುಸುಮಾ ಅನ್ನಭಾಗ್ಯ ಯೋಜನೆ ಕುರಿತು ಮಾತನಾಡಿ, ಅನ್ನಭಾಗ್ಯದಿಂದ ಬಡವರ ಹಸಿವು ನೀಗಿದೆ. ರಾಗಿ ಕೊಟ್ಟರೆ ಇನ್ನೂ ಅನುಕೂಲ ಆಗುತ್ತದೆ. ಇಂದಿರಾ ಕಿಟ್ ನೀಡುವುದರಿಂದ ಸಹ ಅನುಕೂಲವಾಗುತ್ತದೆ ಎಂದರು.
ಭದ್ರಾವತಿಯ ಶ್ವೇತಾ ಗೃಹಜ್ಯೋತಿ ಬಗ್ಗೆ ಮಾತನಾಡಿ ಉಚಿತವಾಗಿ 200 ಯುನಿಟ್ ವಿದ್ಯುತ್ ನಿಂದ ನಮಗೆ ಬಹಳ ಅನುಕೂಲವಾಗಿದೆ. ಯುನಿಟ್‌ನ್ನು ಇನ್ನೂ ಹೆಚ್ಚಿಸುವ ಬಗ್ಗೆ ಸರ್ಕಾರ ಯೋಚಿಸಬೇಕು ಎಂದರು.
ಗೃಹಲಕ್ಷ್ಮಿ ಗೋಪಾಳದ ಅಮೃತಾ ಗೃಹಲಕ್ಷ್ಮಿ ಯೋಜನೆ ಬಗ್ಗೆ ಮಾತನಾಡಿ, ಈ ಯೋಜನೆಯಿಂದಾಗಿ ನಾವು ಗಂಡನ ಮೇಲೆ ಅವಲಂಬಿಸದೆ ವಸ್ತುಗಳನ್ನು ತೆಗೆಕೊಳ್ಳಲು, ಮಕ್ಕಳಿಗೆ ಸಹಾಯ ಮಾಡಲು ಸಾಧ್ಯವಾಗಿದೆ. ಈ ಹಣದಿಂದ ನಾನು ಹೊಲಿಗೆ ಯಂತ್ರೆ ತೆಗೆದುಕೊಂಡಿದ್ದೇನೆ.ಬಡ ಮಹಿಳೆಯರಿಗೆ ಇದು ಅತಿ ಉಪಯುಕ್ತವಾಗಿದೆ.
ಸೊರಬ ತಾಲ್ಲೂಕಿನ ಕಪ್ಪಗಳಲೆ ರೇಣುಕಮ್ಮ ಗೃಹಲಕ್ಷಿö್ಮ ಯೋಜನೆ ಬಗ್ಗೆ ಮಾತನಾಡಿ, ಗೃಹಲಕ್ಷಿö್ಮ ಯೋಜನೆಯಿಂದಾಗಿ ನನ್ನ ಮಗಳ ಮದುವೆ ಜವಳಿಗೆ, ಕಿರಾಣಿಗೆ ಹಣ ಹೊಂದಿಸಿದ್ದೇನೆ. ಕುರಿ ಖರೀದಿ ಮಾಡಿ ಸಾಕುತ್ತಿದ್ದೇನೆ. ಧನ್ಯವಾದಗಳು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಎಸ್‌ಸಿ/ಎಸ್ ಟಿ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ, ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ(ವಿದ್ಯುತ್ ಮಗ್ಗಗಳ)ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಚೇತನ್ ಕೆ, , ಎಂಎಡಿಬಿ ಅಧ್ಯಕ್ಷ ಆರ್ ಎಂ.ಮAಜುನಾಥಗೌಡ, ಜಿ.ಪಂ. ಸಿಇಓ ಹೇಮಂತ್ ಎನ್,
ಪುಷ್ಪಾ ಅಮರನಾಥ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಸದಸ್ಯರು, ತಾಲ್ಲೂಕು ಅಧ್ಯಕ್ಷರು, ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು.