ಮಂಜುನಾಥ್ ಶೆಟ್ಟಿ…
ಶಿವಮೊಗ್ಗ ಜಿಲ್ಲಾ ಕಲ್ಯಾಣ ಮಂದಿರ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ಬಳಕೆಯ ಸಿಲೆಂಡರ್ ಗಳ ಅಭಾವದಿಂದಾಗಿ ಕಲ್ಯಾಣ ಮಂದಿರದ ಮದುವೆ ಇತ್ಯಾದಿ ಕಾರ್ಯಕ್ರಮಗಳನ್ನು ಮಾಡುವವರು ಕೋರುತ್ತಿದ್ದಾರೆ.ಕಲ್ಯಾಣ ಮಂದಿರಗಳಲ್ಲಿ ಗೃಹ ಬಳಕೆಯ ಸಿಲೆಂಡರ್ ಗಳಿಗೆ ಅವಕಾಶ ಇರುವುದಿಲ್ಲ.
ಆದ್ದರಿಂದ ಕಾರ್ಯಕ್ರಮಗಳಿಗೆ ವಾಣಿಜ್ಯ ಬಳಕೆಯ ಸಿಲಿಂಡರ್ ಗಳನ್ನು ಪೂರೈಕೆ ಮಾಡಲು ವ್ಯವಸ್ಥೆ ಮಾಡಿಕೊಡಿ ಹಾಗೂ ಈಗ ಉದ್ದವಾಗಿರುವ ಸಮಸ್ಯೆ ಬಗೆಹರಿಯುವವರೆಗೆ ಗೃಹಬಳಕೆಯ ಸಿಲೆಂಡರ್ ಗಳಿಗೆ ಬಳಸಲು ಅನುಮತಿ ನೀಡಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತಿದ್ದೇವೆ.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಕಟ್ಟೆ ಶ್ರೀನಾಥ್ ಕಾರ್ಯದರ್ಶಿ ನಟರಾಜ್ ಭಾಗವತ್ ಸಹ ಕಾರ್ಯದರ್ಶಿ ದಿನೇಶ್ ಖಜಾಂಚಿ ರಂಗನಾಥ್ ನಿರ್ದೇಶಕರಾದ ಬಿಳಕಿ ಕೃಷ್ಣಮೂರ್ತಿ ಜಯದೇವಯ್ಯ ರಾಘವೇಂದ್ರ ಏಸುದಾಸ್ ಚಂದ್ರಶೇಖರ್ ನಾಯರ್ ಗಿರೀಶ್ ಅಶೋಕ್ ಶಂಕರ್ ಮುಂತಾದವರು ಉಪಸ್ಥಿತರಿದ್ದರು.
ವಂದನೆಗಳೊಂದಿಗೆ… ಶಿವಮೊಗ್ಗ ಜಿಲ್ಲಾ ಸಮಸ್ತ ಕಲ್ಯಾಣ ಮಂದಿರ ಒಕ್ಕೂಟ…