ಮಂಜುನಾಥ್ ಶೆಟ್ಟಿ…

ಶಿವಮೊಗ್ಗ ನೂತನ ಡಿವೈಎಸ್ಪಿ ಯಾಗಿ ಡಾಕ ಬೆನಕ ಪ್ರಸಾದ್ ವರ್ಗಾವಣೆಗೊಂಡಿದ್ದಾರೆ.ದಿಡೀರ್ ಬೆಳವಣಿಗೆಯಲ್ಲಿ ಸಾಗರದ ಎಎಸ್ಪಿ ಡಾ.ಬೆನಕ ಪ್ರಸಾದ್ ರನ್ನ ಶಿವಮೊಗ್ಗದ ಉಪವಿಭಾಗಾಧಿಕಾರಿಯನ್ನಾಗಿ ನೇಮಿಸಿ ವರ್ಗಗೊಳಿಸಿದೆ. ಇದೇ ಜಾಗದಲ್ಲಿದ್ದ ಡಿವೈಎಸ್ಪಿ ಬಾಬು ಅಂಜನಪ್ಪನವರಿಗೆ ಜಾಗ ತೋರಿಸದೆ ವರ್ಗಾವಣೆಗೊಳಿಸಲಾಗಿದೆ.
ಕೇಂದ್ರ ಲೋಕಸೇವಾ ಆಯೋಗ ದೇಶದ ಅತ್ಯುನ್ನತ ನಾಗರೀಕ ಸೇವೆಗಳ ನೇಮಕಕ್ಕೆ 2021ನೇ ಸಾಲಿನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಮೂಲದ ಡಾ. ಈ. ಬೆನಕ ಪ್ರಸಾದ್ ಮೂರನೇ ಪ್ರಯತ್ನದಲ್ಲಿ 92ನೇ ರ್‍ಯಾಂಕ್ ಪಡೆದು ಕರ್ನಾಟಕದ ಟಾಪರ್ ಸಾಲು ಸೇರಿದ್ದಾರೆ.