ಮಂಜುನಾಥ್ ಶೆಟ್ಟಿ…
ಶಿವಮೊಗ್ಗ ಪೊಲೀಸ್ ಜಿಲ್ಲಾ ಸೂಪರಿಂಟೆಂಡೆಂಟ್ ಕಚೇರಿಯಲ್ಲಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ಕಚೇರಿಯನ್ನ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ರವರು ಉದ್ಘಾಟಿಸಿದರು.ಇದರಿಂದ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಗೆ ವಿಶೇಷ ಪವರ್ ಬಂದಂತಾಗಿದೆ.
ಮುಂಜಾಗೃತ ಕ್ರಮವನ್ನ ಜರುಗಿಸುವ ದಂಡಾಧಿಕಾರಿಗಳ ಅಧಿಕಾರವನ್ನ ಸರ್ಕಾರ ನೀಡಿದೆ. ಗಡಿಪಾರು, ಇತ್ಯಾರ್ಥದ ಪ್ರಕರಣಗಳನ್ನ ಎಸ್ಪಿ ಅಥವಾ ಅಡಿಷನಲ್ ಎಸ್ಪಿ ಅವರು ಈ ಅಧಿಕಾರವನ್ನ ಹೊಂದಿದ್ದಾರೆ. ಜಾಮೀನುಗಳನ್ನ ಪಡೆದು ಬಿಡುಗಡೆ ಮಾಡುವ ಅಥವಾ ಜೈಲಿಗೆ ಕಳುಹಿಸುವ ವಿಶೇಷ ಅಧಿಕಾರವನ್ನ ಸರ್ಕಾರ ನೀಡಿದೆ.
ಇಷ್ಟುದಿನ ತಹಶೀಲ್ದಾರ್ ಅಥವಾ ಎಸಿ ಅವರಿಗೆ ಇದ್ದ ಈ ಅಧಿಕಾರವನ್ನ ಈಗ ಎಸ್ಪಿ ಕಚೇರಿಗೆ ನೀಡಿರುವುದು ಹಲವು ಸಮಯಗಳನ್ನ ಪೊಲೀಸರಿಗೆ ಉಳಿಸಿದೆ. ಈ ಕುರಿತು ಮಾತನಾಡಿದ ಎಸ್ಪಿ ನಿಖಿಲ್ .ಬಿ ಇಷ್ಟುದಿನ ಗಡಿಪಾರಿಗೆ ವಿಶೇಷ ವರದಿ ತಯಾರಿಸಿ ತಹಶೀಲ್ದಾರ್ ಮುಂದೆ ಹಾಜರುಪಡಿಸಬೇಕಿತ್ತು. ಈ ಅಧಿಕಾರವನ್ನ ಪೊಲೀಸರಿಗೆ ಸರ್ಕಾರ ನೀಡಿದೆ ಎಂದರು.
ಬಾಂಡಿಂಗ್ ಓವರ್ ಪ್ರಕರಣ ಹಾಗೂ ಗಡಿಪಾರು ಪ್ರಕರಣಗಳನ್ನ ಇಲಾಖೆಯೇ ನಿರ್ವಹಿಸಲಿದೆ. ಗಡಿಪಾರು ಎಲ್ಲಾ ಪ್ರಕರಣಗಳನ್ನ ಇಲಾಖೆ ನಿರ್ವಹಿಸಲಿದೆ. ಸಧ್ಯಕ್ಕೆ ಎ ಮತ್ತು ಬಿ ಪ್ರಕರಣಗಳಾದ ಬಾಂಡಿಂಗ್ ಓವರ್ ಪ್ರಕರಣಗಳನ್ನ ಇಲಾಖೆ ನಿರ್ವಹಿಸುತ್ತಿದ್ದು. ಯಾವುದು ಇಲಾಖೆ ನಿರ್ವಹಿಸಬಹುದೋ ಅದನ್ನ ನೋಡಿಕೊಂಡು ಮುಂದುವರೆಯಲಿದ್ದೇವೆ.
ತಹಶೀಲ್ದಾರ್ ಮತ್ತು ಎಸಿ ಅವರಿಗೆ ಒತ್ತಡ ಹೆಚ್ಚಾದ ಕಾರಣ ಈ ದಙಡಾಧಿಕಾರಿಗಳ ಜವಬ್ದಾರಿ ನಮಗೆ ಬಂದಿದೆ ಎಂದು ಸಹ ಎಸ್ಪಿ ಇದೇ ವೇಳೆ ವಿವರಿಸಿದರು. ಇದೇ ವೇಳೆ ದೊಡ್ಡಪೇಟೆ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಓರ್ವನನ್ನ ಗಡಿಪಾರು ಮಾಡಲು ಎಸ್ಪಿ ಅವರು ಸಹಿ ಹಾಕಿದ್ದಾರೆ.
ಈ ಸಂದರ್ಭದಲ್ಲಿ ಅಡಿಷನಲ್ ಎಸ್ಪಿ ಕಾರ್ಯಪ್ಪ, ಡಿವೈಎಸ್ಪಿ ಬಾಬು ಅಂಜನಪ್ಪ, ಸಂಜೀವ್ ಕುಮಾರ್, ಪಿಐಗಳಾದ ಗುರುರಾಜ್ ಕೆಟಿ, ಹರೀಶ ಪಟೇಲ್, ದೇವರಾಜ್, ಸತ್ಯನಾರಾಯಣ್, ಸಂತೋಷ್ ಕುಮಾರ್, ರವಿ ಸಂಗನಗೌಡ ಪಾಟೀಲ್, ಪಿಎಸ್ಐಗಳಾದ ರಘುವೀರ್, ಸುಷ್ಮ ಹಾಗೂ ಮುಂತಾದವರು ಹಾಜರಿದ್ದರು.