ಮಂಜುನಾಥ್ ಶೆಟ್ಟಿ…

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಬ್ಬಲಗೆರೆಯಿಂದ ಸ್ವಲ್ಪ ಮುಂದೆ ಯುವತಿಯೊಬ್ಬರು ಕಾರಿನಿಂದ ಇಳಿಯುತ್ತಿರುವಾಗ ಹಿಂಭಾಗದಿಂದ ಇಕೋ ಸ್ಪೋರ್ಟ್ ಕಾರಿನಲ್ಲಿ ಬಂದ ಇಬ್ಬರು ಅಪರಿಚಿತರು ಯುವತಿಯ ಕೊರಳಿನಲ್ಲಿದ್ದ ಬಂಗಾರದ ಚೈನ್ ಅನ್ನು ಕಿತ್ತುಕೊಂಡು ಪರಾರಿಯಾದ ಬಗ್ಗೆ ಠಾಣಾ ಗುನ್ನೆ ಸಂಖ್ಯೆ 176/2025 ಕಲಂ: 309(4) ಬಿಎನ್ಎಸ್ ರೀತ್ಯಾ ರೀತ್ಯಾ ಸರಗಳ್ಳತನ ಪ್ರಕರಣ ದಾಖಲಾಗಿರುತ್ತೆ.

ಪ್ರಕರಣದಲ್ಲಿ ಆರೋಪಿ ಹಾಗೂ ಮಾಲು ಪತ್ತೆ ಬಗ್ಗೆ ಶ್ರೀ ನಿಖಿಲ್ ಬಿ. ಐ.ಪಿ.ಎಸ್. ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ , ಶ್ರೀ ಕಾರಿಯಪ್ಪ. ಎ.ಜಿ ಕೆ.ಎಸ್.ಪಿ.ಎಸ್ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-01 ಶಿವಮೊಗ್ಗ ಜಿಲ್ಲೆ ಶಿವಮೊಗ್ಗ, ಶ್ರೀ ಸಂಜೀವ್ ಕುಮಾರ್ ಟಿ ಡಿ.ವೈ.ಎಸ್.ಪಿ ಮಾನ್ಯ ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ ಉಪ ವಿಭಾಗ-ಬಿ ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ರಾಘವೇಂದ್ರ ಕಾಂಡಿಕೆ ಹಾಗೂ ಪಿ.ಎಸ್.ಐ ನವೀನ್ ಮಠಪತಿ & ಸಿಬ್ಬಂದಿಯವರಾದ, ಸಿಪಿಸಿ ಶ್ರೀಕಾಂತ್, ಕಾಶಿನಾಥ, ಕವನ ರವರನ್ನೊಳಗೊಂಡ ತಂಡವನ್ನು ರಚಿಸಲಾಗಿರುತ್ತದೆ.

ಸದರಿ ತನಿಖಾ ತಂಡವು ಪ್ರಕರಣದ ಆರೋಪಿ ಮಂಜುನಾಥನಾಯ್ಕ ಈತನನ್ನು ದಸ್ತಗಿರಿ ಮಾಡಿ, ಕೃತ್ಯಕ್ಕೆ ಉಪಯೋಗಿಸಿದ 5,00,000/- ಮೌಲ್ಯದ ಕಾರು, ಹಾಗೂ ಸುಮಾರು 150,000/-ರೂ ಬೆಲೆಬಾಳುವ 10 ಗ್ರಾಂ ತೂಕದ ಬಂಗಾರದ ಸರವನ್ನು ಅಮಾನತ್ತುಪಡಿಸಿಕೊಂಡು ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತದೆ.

ಈ ಪತ್ತೆ ಕಾರ್ಯವನ್ನು ಶಿವಮೊಗ್ಗ ಜಿಲ್ಲೆಯ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ನಿಖಿಲ್ ಬಿ. ಐ.ಪಿ.ಎಸ್ ರವರು ಶ್ಲಾಘೀಸಿರುತ್ತಾರೆ.

Leave a Reply

Your email address will not be published. Required fields are marked *