ಮಂಜುನಾಥ್ ಶೆಟ್ಟಿ…

ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೂರ್ಯ ಬಡಾವಣೆಯವಾಸಿ 73 ವರ್ಷದ ವೃದ್ದೆಯೊಬ್ಬರು 13ರಂದು ವಾಕಿಂಗ್ ಗೆ ಹೋಗಿದ್ದಾಗ ಇಬ್ಬರು ಅಪರಿಚಿತರು ಬೈಕ್ ನಲ್ಲಿ ಬಂದು ವೃದ್ದೆಯ ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾರೆ.ಈ ಬಗ್ಗೆ ಠಾಣಾ ಗುನ್ನೆ ಸಂಖ್ಯೆ 0093/2026 ಕಲಂ 309 (4) ಬಿ.ಎನ್.ಎಸ್ ರೀತ್ಯಾ ಸರಗಳ್ಳತನ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿರುತ್ತದೆ.

ಪ್ರಕರಣದಲ್ಲಿ ಆರೋಪಿ ಹಾಗೂ ಮಾಲು ಪತ್ತೆ ಬಗ್ಗೆ ಶ್ರೀ ನಿಖಿಲ್ ಬಿ. ಐ.ಪಿ.ಎಸ್. ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ , ಶ್ರೀ ಕಾರಿಯಪ್ಪ. ಎ.ಜಿ ಕೆ.ಎಸ್.ಪಿ.ಎಸ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-01 ಶಿವಮೊಗ್ಗ ಜಿಲ್ಲೆ ಶಿವಮೊಗ್ಗ, ಶ್ರೀ ಸಂಜೀವ್ ಕುಮಾರ್ ಟಿ ಡಿ.ವೈ.ಎಸ್.ಪಿ ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ ಉಪ ವಿಭಾಗ-ಬಿ ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ, ಶ್ರೀ ಸಂತೋಷ ಕುಮಾರ್ ಡಿ. ಕೆ ಪೊಲೀಸ್ ನೀರಿಕ್ಷಕರು ವಿನೋಬನಗರ ಪೊಲೀಸ್ ಠಾಣೆ ರವರ ಉಸ್ತುವಾರಿಯಲ್ಲಿ ಶ್ರೀ ತಿರುಮಲೇಶ್ ಜಿ ಪಿಎಸ್ಐ ಮತ್ತು ಸಿಬ್ಬಂದಿಗಳಾದ ಸಿಪಿಸಿ ಶ್ರೀ ರಾಜು ಕೆ ಆರ್ ಶ್ರೀ ಚಂದ್ರಾನಾಯ್ಕ ಬಿ, ಶ್ರೀ ಮಲ್ಲಪ್ಪ ಎಸ್ ಜಿ, ಶ್ರೀ ಅರುಣಕುಮಾರ್ ಎನ್ ಕೆ, ಶ್ರೀ ಮನುಶಂಕರ್ ರವರುಗಳನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.

ಸದರಿ ತನಿಖಾ ತಂಡವು ಪ್ರಕರಣದ ಆರೋಪಿತರಾದ 1) ಭರತ್ 21 ವರ್ಷ ಚಾಲುಕ್ಯನಗರ ಗೋಪಾಳ ಶಿವಮೊಗ್ಗ ಟೌನ್ ಮತ್ತು 2) ಮೊಹ್ಮದ್ ಆಬೀದ್ 19 ವರ್ಷ ಮೇಲಿನ ತುಂಗಾನಗರ ಗೋಪಾಳ ಶಿವಮೊಗ್ಗ ರವರುಗಳನ್ನು ದಸ್ತಗಿರಿ ಮಾಡಿ ಪ್ರಕರಣಕ್ಕೆ ಸಂಬಂಧಪಟ್ಟ 07 ಗ್ರಾಂ ತೂಕದ ಬಂಗಾರ ಅಂದಾಜು ಬೆಲೆ 1,00,000 ಮತ್ತು ಕೃತ್ಯಕ್ಕೆ ಬಳಸಿದ ಬೈಕ್ ಅಂದಾಜು ಬೆಲೆ 40,000/- ರೂ ಸೇರಿ ಒಟ್ಟು ಅಂದಾಜು ಮೌಲ್ಯ 1,40,000/- ರೂ ಮಾಲನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಈ ಪತ್ತೆ ಕಾರ್ಯವನ್ನು ಶಿವಮೊಗ್ಗ ಜಿಲ್ಲೆಯ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ನಿಖಿಲ್ ಬಿ. ಐ.ಪಿ.ಎಸ್ ರವರು ಶ್ಲಾಘೀಸಿರುತ್ತಾರೆ.

Leave a Reply

Your email address will not be published. Required fields are marked *