ಮಂಜುನಾಥ್ ಶೆಟ್ಟಿ…

2025-26 ನೇ ಸಾಲಿನ ಶೈಕ್ಷಣಿಕ ಸಾಲಿನಲ್ಲಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಪದವಿ ಹಾಗೂ ಪದವಿ ಕಾಲೇಜುಗಳಲ್ಲಿ ರ‌್ಯಾಂಕ್ ಪಡೆದಿರುವ ಬಗ್ಗೆ ಆಡಳಿತ ಮಂಡಳಿ ಪತ್ರಿಕಾಗೋಷ್ಠಿ ನಡೆಸಿದರು.

ಬಸಪ್ಪ ಗೌಡ ಮಾತನಾಡಿ SSLC ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ 625-621 ನ್ನ ಪಡೆದು ಶಾಂಭವಿ ಎಂಬ ವಿದ್ಯಾರ್ಥಿನಿ ಡಿವಿಎಸ್ ನ ಇತಿಹಾಸದಲ್ಲಿಯೇ ಪ್ರಥಮ ಸ್ಥಾನ ಪಡೆದು ಇತಿಹಾಸ ನಿರ್ಮಿಸಿದ್ದಾರೆ. ಲಕ್ಷ್ಮೀ 625 ಕ್ಕೆ 602 ಅಂಕಪಡೆದಿದ್ದಾರೆ. ಇದರಿಂದ ಕಾಲೇಜು ಒಟ್ಟು 95.65% ಪಡೆದಿದೆ ಎಂದರು.

ಎಸ್ ಪಿ ದಿನೇಶ್ ಮಾತನಾಡಿ DVS ಪ್ರೌಢಶಾಲೆ ವಿನೋಬನಗರದಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದಿದೆ. ಪದವಿ ಪೂರ್ವ ಸ್ವತಂತ್ರ್ಯ ಕಾಲೇಜಿನಲ್ಲಿ 2025-26 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 5 ರ‌್ಯಾಂಕ್ ವಿಜ್ಞಾನದಲ್ಲಿ 1 ರ‌್ಯಾಂಕ್ ಕಲಾ ವಿಭಾಗದಲ್ಲಿ ಎರಡು ರ‌್ಯಾಂಕ್ ಪಡೆದು ಒಟ್ಟು 8 ರ‌್ಯಾಂಕ್ ಪಡೆದು 97.31 % ಪಡೆದಿದೆ ಎಂದರು.

ದ್ವೀತೀಯ ಪಿಯುಸಿ ಸಂಯಕ್ತ ಪದವಿ ಪೂರ್ವ ಕಾಲೇಜಿನಲ್ಲಿ 100 ಕ್ಕೆ 100 ರಷ್ಟು ಅಂಕ ಪಡೆದು ಶೇ.93.51 ರಷ್ಟು ಫಲಿತಾಂಶ ಪಡೆದುಕೊಂಡಿದೆ. 2024-25 ನೇ ಸಾಲಿನಲ್ಲಿ ಒಟ್ಟು 6 ರ‌್ಯಾಂಕ್ ಗಳನ್ನ ಪಡೆದು 03 ಗೋಲ್ಡ್ ಮೆಡಲ್ ಗಳನ್ನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಕುವೆಂಪು ವಿವಿಯಲ್ಲಿ ಪಡೆದಿದೆ. 83 ವರ್ಷ ತುಂಬಿ 84 ನೇ ವರ್ಷಕ್ಕೆ ಕಾಲಿಟ್ಟಿವೆ ಎಂದರು.

ಪಾಲಿಟೆಕ್ನಿಕ್ ನಲ್ಲಿ 2026-27 ರಲ್ಲಿ AI ವಿಭಾಗವನ್ನ ಹೊಸದಾಗಿ ಆರಂಭಿಸಿರುವುದಾಗಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಮಧುಸೂದನ್ ಶೆಟ್ಟಿ ಸಹ ಕಾರ್ಯದರ್ಶಿ ಡಾ ಎ ಸತೀಶ್ ಕುಮಾರ್ ಶೆಟ್ಟಿ ನಿತಿನ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *