ಮಂಜುನಾಥ್ ಶೆಟ್ಟಿ…

ಶಿವಮೊಗ್ಗದ ನಂಜೆಗೌಡ ಎಂಬ ವ್ಯಕ್ತಿಯಿಂದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ  ರವರ ಫೋಟೋವನ್ನು ದುರ್ಬಳಕೆ ಮಾಡಿ ಅಶ್ಲೀಲವಾಗಿ ಬೇರೆ ದೇಶದ ಪ್ರಧಾನಿ ಮಹಿಳೆಯೊಂದಿಗೆ ಚಿತ್ರಿಸಿ, ರಾಜ್ಯದಲ್ಲಿ ಶಾಂತಿ ಭಂಗ ಮಾಡುವ ಉದ್ದೇಶದಿಂದ facebook ನಲ್ಲಿ ಪ್ರಧಾನಿಗಳ ವಿರುದ್ಧ ಸುಳ್ಳು ಸುದ್ದಿ ಹರಡಿ ದೇಶದ್ರೋಹ ಕೆಲಸ ಮಾಡುತ್ತಿರುವುದರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿ ಸಾಮಾಜಿಕ ಜಾಲತಾಣ ಸಂಚಾಲಕರಾದ ಶರತ್ ಎಸ್ ವಿ ಕಲ್ಯಾಣಿ ಮತ್ತು ದಿನೇಶ್ ಆಚಾರ್ ತಂಡ ಸೈಬರ್ ಕ್ರೈಂ ವಿಭಾಗ ಜಯನಗರ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್ ಅವರಿಗೆ ದೂರು ಸಲ್ಲಿಸಿದರು.

ದಿನಾಂಕ 27.05.2026 ರಂದು ರಾಜ್ಯ ಬಿಜೆಪಿ ಕಛೇರಿಯಲ್ಲಿರಬೇಕಾದರೆ, ನಂಜೇಗೌಡ ಎಂಬ ವ್ಯಕ್ತಿಯ ಫೇಸ್ ಬುಕ್ ಪೇಜ್‌ನಲ್ಲಿ ಅವನು ತನ್ನ facebook ಪೇಜ್ ನಲ್ಲಿ ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ.ನರೇಂದ್ರ ಮೋದಿ ಜೀ ರವರ ಫೋಟೋವನ್ನು ದುರ್ಬಳಕೆ ಮಾಡಿ ಅಶ್ಲೀಲವಾಗಿ ಬೇರೆ ದೇಶದ ಪ್ರಧಾನಿ ಮಹಿಳೆಯೊಂದಿಗೆ ಚಿತ್ರಿಸಿ, “AI ಬಂದಿದೆ ಅಂತ ಟೆಕ್ನಾಲಜಿನಾ ನಮ್ಮುಡುಗ್ರು ಈ ಮಟ್ಟಕೆಲ್ಲಾ ಬೆಡ್ ರೂಮಿಗೇ ಹೊಗಿ ಹೆಸರು ಕೆಡಿಸಬಾರದು ಸುಬ್ರಹ್ಮಣ್ಯ ಸ್ವಾಮಿ ಬೇಜಾರು ಮಾಡ್ಕೊತಾರೆ . !!!” ಎಂಬ ಶೀರ್ಷಿಕೆಯೊಂದಿಗೆ, ಮೋದಿಜೀ ಯವರ ಫೋಟೋವನ್ನು ಹೆಣ್ಣಿನ ಜೊತೆ ಪ್ರಣಯಿಸುವ ರೀತಿಯಲ್ಲಿ ಎಡಿಟ್ ಮಾಡಿ ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ.ನರೇಂದ್ರ ಮೋದಿ ಜೀ ರವರ ಘನತೆ ಮತ್ತು ಹುದ್ದೆಗೆ ಧಕ್ಕೆ ತಂದು ಅಪಹಾಸ್ಯ ಮಾಡಿ ಸಮಾಜದಲ್ಲಿ ಶಾಂತಿ ಭಂಗ ಮಾಡುವ ಉದ್ದೇಶದಿಂದ ಸುಳ್ಳು ಸುದ್ದಿ ಹಬ್ಬಿಸಿ ಜನರ ನಡುವೆ ರಾಜಕೀಯ ದ್ವೇಷ ಹುಟ್ಟುಹಾಕಿ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ಸುಳ್ಳು ಸುದ್ದಿಯನ್ನು ಪೋಸ್ಟ್ ಮಾಡಿ ದೇಶ ದ್ರೋಹದ ಕೆಲಸದಲ್ಲಿ ತೊಡಗಿರುತ್ತಾನೆ ಎಂದು ಆರೋಪಿಸಿದ್ದಾರೆ .

ಇತನ ಕೃತ್ಯ ಸಮಾಜದಲ್ಲಿ ರಾಜಕೀಯ ಪಕ್ಷಗಳ ಗುಂಪುಗಳ ನಡುವೆ ಘರ್ಷಣೆಯನ್ನು ಉಂಟು ಮಾಡಲು ಪ್ರೇರೇಪಿಸುತ್ತಿರುವುದು ಸ್ಪಷ್ಟವಾಗಿರುತ್ತದೆ ಎಂದು ಉಲ್ಲೇಖಸಿದ್ದಾರೆ .ಆದ್ದರಿಂದ, ನಂಜೇಗೌಡ ಎಂಬ ವ್ಯಕ್ತಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಮನವಿ.ಈ ದೂರಿನೊಂದಿಗೆ ಮಾನ್ಯ ಪ್ರಧಾನಮಂತ್ರಿಗಳ ವಿರುದ್ಧ ಮಾಡಿರುವ ಸುಳ್ಳು ಪೋಸ್ಟ್ ಅನ್ನು ಲಗ್ಗತಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಶರತ್ ಎಸ್. ವಿ. ಕಲ್ಯಾಣಿ, ದಿನೇಶ್ ಆಚಾರ್ಯ ಸುರೇಶ್ ಬಾಬು ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *