ಮಂಜುನಾಥ್ ಶೆಟ್ಟಿ…

ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಮಾಜಿ ಸೈನಿಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯು ದಿನಾಂಕ 29-05-2026 ರಿಂದ 06-06-2026 ರವರೆಗೆ ಸಮಯ ಬೆಳಿಗ್ಗೆ 10.00 ಘಂಟೆಯಿAದ ಸಂಜೆ 05.00 ಘಂಟೆಯವರೆಗೆ ನೇರ ಸಂದರ್ಶನ ಏರ್ಪಡಿಸಿದೆ.


ಆಸಕ್ತ ಮಾಜಿ ಸೈನಿಕರು ತಮ್ಮ ಮಾಜಿ ಸೈನಿಕರ ಗುರುತಿನ ಚೀಟಿ ಮತ್ತು ಸೇನಾ ಸೇವಾ ನಿವೃತ್ತಿ ಪುಸ್ತಕಗಳೊಂದಿಗೆ ಪಿ.ಎಸ್ ರಮೇಶ್, ಉಪ ನಿರ್ದೇಶಕರು ಹಾಗೂ ಬಂದೀಖಾನೆಗಳ ಮುಖ್ಯ ಅಧೀಕ್ಷಕರು, ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಅಕಾಡೆಮಿ, ಕಾಳಿದಾಸ ರಸ್ತೆ, ಗಾಂದಿ ನಗರ, ಮಹಾ ಬೋಧಿ ಸೊಸೈಟಿಯ ಪಕ್ಕ, ಫ್ರೀಡಂ ಪಾರ್ಕ್, ಬೆಂಗಳೂರು, ಮೊಬೈಲ್ ಸಂಖ್ಯೆ 9632496560, 9480806400 ಇವರನ್ನು ಸಂಪರ್ಕಿಸುವಂತೆ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರಾದ ಡಾ. ಎಸ್.ವಿ. ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *