ಮಂಜುನಾಥ್ ಶೆಟ್ಟಿ…

ಸುಬ್ಬಯ್ಯ ಸಮೂಹ ಸಂಸ್ಥೆಗಳು ಮತ್ತು ಸುಬ್ಬಯ್ಯ ಮೆಡಿಕಲ್ ಕಾಲೇಜ್ ಸಂಸ್ಥಾಪಕರು ಆದ ದಿವಂಗತ ಟಿ. ಸುಬ್ಬರಾಮಯ್ಯ ಅವರ ನೆನೆಪಿಗೋಸ್ಕರ ಅವರ ಹುಟ್ಟೂರಾದ ಹುಂಚದ ಬಿಲ್ಲೆಶ್ವರ ಗ್ರಾಮದಲ್ಲಿ ಸಾರ್ವಜನಿಕರಿಗೋಸ್ಕರ ಉಚಿತ ಸುಸಜ್ಜಿತ ಆಸ್ಪತ್ರೆಯನ್ನು ಹುಂಚದ ಹೊಂಬುಜ ಜೈನ ಮಠದ ಪರಮಾಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ!!ದೇವೇಂದ್ರ ಕೀರ್ತಿ ಬಟ್ಟಾರಕ ಪಟ್ಟಾಚಾರ್ಯವರ್ಯರು ಲೋಕಾರ್ಪಣೆ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೋಂಬುಜ ಜೈನ ಮಠದ ಪರಮಪೂಜ್ಯ ಜಗದ್ಗುರುಗಳು ಸುಬ್ಬರಾಮಯ್ಯ ರವರ ಮಕ್ಕಳು ಅವರ ತಂದೆಯ ನೆನಪಿಗೋಸ್ಕರ ಉಚಿತ ಆಸ್ಪತ್ರೆ ಪ್ರಾರಂಭ ಮಾಡಿರುವುದು ಅತ್ಯಂತ ಒಳ್ಳೆಯ ಕೆಲಸ ಎಂದು ಶ್ಲಾಘಿಸಿದರು.ಮಠದಲ್ಲಿರುವ ಆಂಬುಲೆನ್ಸ್ ಅನ್ನು ಆಸ್ಪತ್ರೆಗೆ ಉಚಿತವಾಗಿ ಬಳಸಿಕೊಳ್ಳಿ ಎಂದರು.

ಪಟ್ಟಾಭಿ ರಾಮ್ ರವರು ಮಾತನಾಡಿ ಸುಬ್ಬಯ್ಯ ಆಸ್ಪತ್ರೆ ಮೆಡಿಕಲ್ ಕಾಲೇಜ್ ಮತ್ತು ಮ್ಯಾಕ್ಸ್ ಆಸ್ಪತ್ರೆಗಳ ಸೇವೆಯನ್ನು ಸ್ಮರಿಸಿದರು.ಅವರ ಸೇವೆ ದಿವಂಗತ ಸುಬ್ಬಯ್ಯನವರ ಹುಟ್ಟುರಾದ ಹುಂಚ ಮತ್ತು ಸುತ್ತಮುತ್ತಲ ಹಳ್ಳಿಗಳ ಜನರಿಗೆ ಅನುಕೂಲವಾಗಲಿ ಎಂದು ಯಾವ ಸರ್ಕಾರಗಳು ಮಾಡದ ಕೆಲಸವನ್ನು ಸುಬ್ಬಯ್ಯ ಸಂಸ್ಥೆಯವರು ಮಾಡುತ್ತಿದ್ದಾರೆ ಎಂದರು.

ವೇದಿಕೆಯಲ್ಲಿ ತೀರ್ಥಹಳ್ಳಿ ಶಾಸಕರು ಆರಗ ಜ್ಞಾನೇಂದ್ರ ರವರು ಮಾಜಿ ಶಾಸಕರಾದ ಕಿಮ್ಮನೆ ರತ್ನಾಕರ್ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ CS ಷಡಕ್ಷರಿ ರವರು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕಲಗೋಡು ರತ್ನಾಕರ್ ಅವರು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರುಗಳು ಸುಬ್ಬಯ್ಯ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ ನಾಗೇಂದ್ರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *