ಮಂಜುನಾಥ್ ಶೆಟ್ಟಿ…
ಯುವ ನಾಯಕ ರಿಜ್ವಾನ್ ಹರ್ಷದ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ರಿಜ್ವಾನ್ ಹರ್ಷದ್ ಅಭಿಮಾನಿ ಬಳಗ ಶಿವಮೊಗ್ಗದ ವತಿಯಿಂದ ನಗರದ ಮಹಾವೀರ ವೃತ್ತದಲ್ಲಿರುವ ದರ್ಗಾದಲ್ಲಿ ಚಾದರ ಹೊದಿಸಿ ವಿಶೇಷ ಪ್ರಾರ್ಥನೆ ಮಾಡಲಾಯಿತು.
ರಿಜ್ವಾನ್ ಹರ್ಷದ್ ರವರು ಸತತವಾಗಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಎನ್ ಎಸ್ ಯು ಐ ನ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಯುವ ಕಾಂಗ್ರೆಸ್ಸಿನ ರಾಜ್ಯಾಧ್ಯಕ್ಷರಾಗಿ ಸತತವಾಗಿ ಎರಡು ಬಾರಿ ಆಯ್ಕೆಯಾಗಿ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದಾರೆ.
ಅಲ್ಲದೆ ಬಳ್ಳಾರಿ ಲೋಕಸಭಾ ಚುನಾವಣೆ ಹಾನಗಲ್ ಸವಣೂರು ದಾವಣಗೆರೆ ವಿಧಾನಸಭೆಯ ಉಪಚುನಾವಣೆಗಳಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ ಪಕ್ಷದ ಗೆಲುವಿಗೆ ಸಾಕಷ್ಟು ಶ್ರಮಿಸಿದ್ದಾರೆ. ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ಹಲವಾರು ಕಾರ್ಯಕರ್ತರನ್ನು ನಾಯಕರಾಗಿ ಬೆಳಸಿ ಅಲ್ಪಸಂಖ್ಯಾತರ ಯಶಸ್ವಿ ಯುವನಾಯಕ ಎನಿಸಿಕೊಂಡಿದ್ದಾರೆ ಯುವಕರಿಗೆ ಪ್ರೇರಣೆಯಾಗಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಯುವಕರನ್ನು ಸೆಳೆಯುವ ಶಕ್ತಿ ಹೊಂದಿದ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಾದ ರಿಜ್ವಾನ್ ಹರ್ಷದ್ ರವರಿಗೆ ಕರ್ನಾಟಕ ಸರ್ಕಾರದ ಸಚಿವ ಸಂಪುಟದಲ್ಲಿ ಜವಾಬ್ದಾರಿಯುತ ಖಾತೆಯೊಂದಿಗೆ ಸಚಿವ ಸ್ಥಾನ ಲಭಿಸಲಿ ಎಂದು ನಗರದ ಶಾ ಅಲಿಂ ದರ್ಗಾದಲ್ಲಿ ಶಿವಮೊಗ್ಗ ರಿಜ್ವಾನ್ ಹರ್ಷದ್ ಅಭಿಮಾನಿ ಬಳಗದ ಅಧ್ಯಕ್ಷರಾದ ಮಹಮದ್ ಆರೀಫ್ ಉಲ್ಲಾ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಮುನ್ನಾ. ಹಸನ್. ಅಹಮದ್. ಇತರರಿದ್ದರು