ಮಂಜುನಾಥ್ ಶೆಟ್ಟಿ…

ದೇಶದ ಸಾರಿಗೆ ರಂಗದಲ್ಲಿ ಮಹತ್ತರ ಕ್ರಾಂತಿ ಸೃಷ್ಟಿಸಿರುವ ವಿಆರ್‌ಎಲ್ (VRL) ಸಮೂಹ ಸಂಸ್ಥೆಗಳ ಸಂಸ್ಥಾಪಕರು, ಮಾಧ್ಯಮ ರಂಗದ ಧ್ರುವತಾರೆ ಹಾಗೂ ಪದ್ಮಶ್ರೀ ಪುರಸ್ಕೃತ ಹಿರಿಯ ಉದ್ಯಮಿಗಳಾದ ಗೌರವಾನ್ವಿತ ಡಾ. ವಿಜಯ ಸಂಕೇಶ್ವರ ಅವರು ಇಂದು ಶಿವಮೊಗ್ಗದ ವಿನೋಬನಗರದಲ್ಲಿರುವ ನಮ್ಮ ನಿವಾಸಕ್ಕೆ ಸೌಹಾರ್ದಯುತವಾಗಿ ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ದೇಶದ ಪ್ರಸ್ತುತ ಉದ್ಯಮ ರಂಗದ ಬೆಳವಣಿಗೆ, ಸಾಮಾಜಿಕ ಚಿಂತನೆಗಳು ಹಾಗೂ ಕ್ಷೇತ್ರದ ವಿವಿಧ ಅಭಿವೃದ್ಧಿ ವಿಷಯಗಳ ಕುರಿತು ಅವರೊಂದಿಗೆ ಅತ್ಯಂತ ಸಾರ್ಥಕ ಹಾಗೂ ವೈಚಾರಿಕ ಚರ್ಚೆಗಳನ್ನು ನಡೆಸಲಾಯಿತು. ಅವರ ಸುದೀರ್ಘ ಅನುಭವದ ಮಾತುಗಳು ಮತ್ತು ಮಾರ್ಗದರ್ಶನ ನಮಗೆ ಸದಾ ಪ್ರೇರಣಾದಾಯಕವಾಗಿದೆ.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಶ್ರೀ ಎಸ್. ರುದ್ರೇಗೌಡ್ರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ ಅವರು ಉಪಸ್ಥಿತರಿದ್ದು, ಚರ್ಚೆಯಲ್ಲಿ ಪಾಲ್ಗೊಂಡರು.

Leave a Reply

Your email address will not be published. Required fields are marked *