ಮಂಜುನಾಥ್ ಶೆಟ್ಟಿ…
ಶಿವಮೊಗ್ಗದ ನಾರಾಯಣ ಕ್ಲಿನಿಕ್‌ನಲ್ಲಿ ಅತ್ಯಾಧುನಿಕ Endoscopy & Chemotherapy ಸೇವೆಗಳನ್ನು ಸಂಸದ ಬಿ ವೈ ರಾಘವೇಂದ್ರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಒಂದು ಕಾಲದಲ್ಲಿ ಗಂಭೀರ ಚಿಕಿತ್ಸೆಗಾಗಿ ಬೆಂಗಳೂರು-ಮಣಿಪಾಲ ಅವಲಂಬಿಸುತ್ತಿದ್ದ ಶಿವಮೊಗ್ಗ, ಇಂದು ಸಮಗ್ರ ಆರೋಗ್ಯ ಕೇಂದ್ರವಾಗಿ ಪರಿವರ್ತನೆಯಾಗುತ್ತಿದೆ. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಂತೆ, ಬಜೆಟ್ 2026-27ರಲ್ಲಿ 17 ಪ್ರಮುಖ ಕ್ಯಾನ್ಸರ್ ಔಷಧಿಗಳ ಮೇಲಿನ ಆಮದು ಸುಂಕ ರದ್ದುಗೊಳಿಸಿ ಬಡವರ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲಾಗಿದೆ ಎಂದರು.
ಕ್ಷೇತ್ರದ ಜನರಿಗೆ ಅವರದ್ದೇ ಮಣ್ಣಿನಲ್ಲಿ ಅತ್ಯಾಧುನಿಕ ಚಿಕಿತ್ಸೆ ಒದಗಿಸುವುದೇ ನಮ್ಮ ಸಂಕಲ್ಪ.ಆರೋಗ್ಯವಂತ ಶಿವಮೊಗ್ಗವೇ ನಮ್ಮ ಗುರಿ ಎಂದರು.ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳಾದ ಶ್ರೀಕಾಂತ್ ಹೆಗ್ಡೆ ಮತ್ತು ಮುಂತಾದವರು ಉಪಸ್ಥಿತರಿದ್ದರು.