ಮಂಜುನಾಥ್ ಶೆಟ್ಟಿ…
ಕದಂಬ ಕನ್ನಡ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಟಾಟಾ ಪವರ್ ಕಂಪನಿ ಲಿಮಿಟೆಡ್ ವಿದ್ಯುತ್ ವಿತರಣಾ ಮಾಡಲು ರಾಜ್ಯ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗಕ್ಕೆ ಪರವಾನಗಿ ಸಲ್ಲಿಸಲಾದ ಅರ್ಜಿಗೆ ರಾಜ್ಯ ಸರ್ಕಾರದಿಂದ ಅನುಮತಿ ನೀಡಬಾರದೆಂದು ಜಿಲ್ಲಾಧಿಕಾರಿಗಳಿಗೆ ಕದಂಬ ಕನ್ನಡ ವೇದಿಕೆ ವತಿಯಿಂದ ಮನವಿ ಸಲ್ಲಿಸಿದರು.
ಕರ್ನಾಟಕ ಸರ್ಕಾರಿ ಬಾಲ್ಯದ ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ ಮೆಸ್ಕಾಂ ಹೆಸ್ಕಾಂ ಚೆಸ್ಕಾಂ ವ್ಯಾಪ್ತಿಯ ಹೆಚ್ಚು ಆದಾಯವುಳ್ಳ 19 ಜಿಲ್ಲೆಗಳಲ್ಲಿ ಸಮಾನಂತರವಾಗಿ ಖಾಸಗಿ ಸಂಸ್ಥೆಯಿಂದ ಮುಂಬೈಯ ಟಾಟಾ ಸೋಲಾರ್ ಕಂಪನಿ ಲಿಮಿಟೆಡ್ ಗ್ರಾಹಕರಿಗೆ ವಿದ್ಯುತ್ ವಿತರಣೆ ಮಾಡಲು ಪರವಾನಗಿಯನ್ನು ಕೋರಿ ರಾಜ್ಯ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗಕ್ಕೆ ಅರ್ಜಿ ಸಲ್ಲಿಸಿ ಈ ಬಗ್ಗೆ ಬಾಗಿದಾರರ ಆಕ್ಷೇಪಣೆ ಅಭಿಪ್ರಾಯವನು ಆಹ್ವಾನಿಸಿ ಪತ್ರಿಕೆಗಳಲ್ಲಿ ಪ್ರಕಟಣೆ ಹೊರಡಿಸಲಾಗಿದೆ.
ಆದ್ದರಿಂದ ರಾಜ್ಯ ಸರ್ಕಾರವು ಯಾವುದೇ ರೀತಿಯ ಪರವಾಗಿ ನೀಡಬಾರದು ಎಂದು ಈ ಮೂಲಕ ಆಗ್ರಹಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ವಿಶ್ವನಾಥ್ ಗೌಡ ಮುಖಂಡರು ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.