ಮಂಜುನಾಥ ಶೆಟ್ಟಿ…

ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಇಎಸ್ಐ ಸೌಲಭ್ಯವಿದ್ದರೂ ಕಾರ್ಮಿಕರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಪ್ರತಿಭಟನೆ ನಡೆಸಿದರು.

ಕಾರ್ಮಿಕರಿಗೆ ಇಎಸ್ಐ ಸೌಲಭ್ಯ ಎಂಬುದು ವರದಾನ ವಿದ್ದಂತೆ. ಕಾರ್ಕನೆಯ ಮತ್ತು ಕೆಲಸ ಮಾಡುತ್ತಿರುವ ಸ್ಥಳಗಳಲ್ಲಿ ಮಾಲೀಕರು ಪ್ರತಿ ತಿಂಗಳು ಇಎಸ್ಐ ಸೌಲಭ್ಯ ಪಡೆಯಲು ಕಾರ್ಮಿಕರಿಂದ ಹಣ ಪಡೆದು ಸರ್ಕಾರಕ್ಕೆ ಕೋಟಿ ಕೋಟಿ ರೂ.ಗಳನ್ನು ಕಟ್ಟುಸಿದ್ದಾರೆ. ಆದರೆ ಇಎಸ್ಐ ಸೌಲಭ್ಯ ಕೊಡುತ್ತೇವೆ ಎಂದು ಹೇಳುವ ಆಸ್ಪತ್ರೆಗಳು ಆ ಕಾರ್ಮಿಕರಿಗೆ ಮತ್ತು ಅವರ ಕುಟುಂಬಕ್ಕೆ ಚಿಕಿತ್ಸೆಯನ್ನು ನೀಡುತ್ತಿಲ್ಲ ಎಂದು ಆರೋಪಿಸಿದರು.

ಹೀಗಾಗಿ ಕಾರ್ಮಿಕರ ಅಲೆದಾಡುವಂತೆ ಪರಿಸ್ಥಿತಿ ಬಂದಿದೆ.ಆದ್ದರಿಂದ ಇಎಸ್ಐ ಸೌಲಭ್ಯ ಇರುವ ಆಸ್ಪತ್ರೆಗಳಲ್ಲಿ ತಕ್ಷಣ ಚಿಕಿತ್ಸೆಯನ್ನು ಆರಂಭಿಸಬೇಕು. ಇಲ್ಲದಿದ್ದರೆ ನಮ್ಮ ವೇದಿಕೆಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ಅಧ್ಯಕ್ಷ ವಾಟಾಳ್ ಮಂಜುನಾಥ್ ನಿತಿನ್ ಪ್ರವೀಣ್ ಮಾರುತಿ ಜಯಂತ್ ರಾಕೇಶ್ ಲೋಕೇಶ್ ರವಿ ಮತ್ತೂರು ಮೈಲಾರಪ್ಪ ಅಕ್ಬರ್ ಪಾಷಾ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *