ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥ ಹಂಚಿ ರವರಿಗೆ ರಿಕ್ರಿಯೇಷನ್ ಕ್ಲಬ್ ಲೈಸನ್ಸ್ ಕೊಡಿಸುವುದಾಗಿ ಡಿ.ಕೆ ಶಿವಕುಮಾರ್. ಮಾನ್ಯ ಮುಖ್ಯಮಂತ್ರಿಯವರ ಪಿ.ಎ ಎಂಬ ಹೆಸರು ಹೇಳಿಕೊಂಡು ನಂಬಿಸಿ 15 ಲಕ್ಷ ರೂ ಹಣ ಪಡೆದು ವಂಚನೆ ಮಾಡಿದ ಬಗ್ಗೆ ಪಿರ್ಯಾದಿಯಾದ ಮಂಜುನಾಥ ಹಂಚಿ ರವರು ದೂರು ನೀಡಿದ ಮೇರೆಗೆ ತುಂಗಾನಗರ ಪೊಲೀಸ್ ಠಾಣಾ ಗುನ್ನೆ ನಂ-504/2026 ಕಲಂ 318(4) ಬಿ.ಎನ್.ಎಸ್ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.
ಸದರಿ ಪ್ರಕರಣದ ಆರೋಪಿಯ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರವರಾದ ಶ್ರೀ ನಿಖಿಲ್ ಬಿ. ಐಪಿಎಸ್, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರವರಾದ ಶ್ರೀ ಎ.ಜಿ ಕಾರಿಯಪ್ಪ ಹಾಗೂ ಶಿವಮೊಗ್ಗ-ಉಪವಿಭಾಗದ ಪೊಲೀಸ್ ಉಪಾಧೀಕ್ಷಕರವರಾದ ಶ್ರೀ ಶೀಲವಂತ ಹೊಸಮನಿ ರವರ ಮಾರ್ಗದರ್ಶನದಲ್ಲಿ ತುಂಗಾನಗರ ಇನ್ಸ್ ಪೆಕ್ಟರ್ ಶ್ರೀ ಕೆ.ಟಿ ಗುರುರಾಜ್ ರವರು, ಪಿ.ಎಸ್.ಐ ಶ್ರೀಮತಿ ಮಂಜಮ್ಮ, ಹಾಗೂ ಪೊಲೀಸ್ ಸಿಬ್ಬಂದಿಯವರಾದ ಶೋಭರಾಣಿ. ನಾಗರಾಜ, ಹರೀಶ್ ನಾಯ್ಕ, ನಿತಿನ್, ತಮ್ಮಣ್ಣ ಜಂಬಗಿ ರವರನ್ನೊಳಗೊಂಡ ತಂಡವು ಚಿಕ್ಕಮಂಗಳೂರು ಜಿಲ್ಲೆ ಕಡೂರು ತಾಲ್ಲೂಕ್ ಚಿಕ್ಕ ಅಂಗಳ ಗ್ರಾಮದ ರಸ್ತೆಯ ಬಳಿ ಆರೋಪಿತನಾದ ಹೇಮಂತ್ ಕುಮಾರ್. @ ಗಣೇಶ ಬಿನ್ ಕುಮಾರ್ 30 ವರ್ಷ, ವಾಸ ಶರಾವತಿನಗರ ಶಿವಮೊಗ್ಗ ಈತನನ್ನು ಈ ದಿನ ದಿನಾಂಕ:-29/07/2026 ರಂದು ವಶಕ್ಕೆ ಪಡೆದು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿರುತ್ತದೆ.
ಈ ತಂಡದ ಕೆಲಸದ ಬಗ್ಗೆ ಮೇಲಾಧಿಕಾರಿಗಳು ಶ್ಲಾಘಿಸಿರುತ್ತಾರೆ.