ಮಂಜುನಾಥ್ ಶೆಟ್ಟಿ…
ಅನಿಕೇತನ ಸೇವಾ ಟ್ರಸ್ಟ್ ವತಿಯಿಂದ ಆಗಸ್ಟ್ 29ರಂದು ಸಂಜೆ 6ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಛತ್ರಪತಿ ಶಿವಾಜಿ ಮಹಾರಾ ಜ ಅದ್ಭುತ ಇತಿಹಾಸ ನಾಟಕವನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ರಮೇಶ್ ಬಾಬು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ಟ್ರಸ್ಟ್ 2009ರಿಂದ ಶಿಕ್ಷಣ ಸಂಸ್ಕೃತಿ ಮತ್ತು ಸೇವಾ ಕಾರ್ಯದಲ್ಲಿ ತೋಡಗಿದೆ.2014 ವಾಯ್ಸ್ ಆಫ್ ಕರ್ನಾಟಕ 2015ರಲ್ಲಿ ಶಿವಾಜಿ ನಾಟಕ 2017ರ ಸರಿಗಮಪ ವಿಜೇತರ ಗಣೇಶೋತ್ಸವ ಪುರಂದರ ಪ್ರಭಾ ಕಥಕ್ ಅಮ್ಮ ಅಮರ ಅನೇಕ ಕಾರ್ಯಕ್ರಮಗಳ ಮಾಡಿದ್ದೇವೆ. ಕರೋನಾ ಮತ್ತು ನೆರೆ ಸಂದರ್ಭದಲ್ಲಿ ಸೇವಾ ಕಾರ್ಯವನ್ನು ಮಾಡಿದ್ದೇವೆ ಎಂದರು.
ಪ್ರಸಿದ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಲ್ ಬೈಲ್ ನಿರ್ದೇಶಿಸಿದ್ದು ಬೆಂಗಳೂರು ಮತ್ತು ಮಂಗಳೂರಿನ 20ಕೂ ಹೆಚ್ಚು ಕಲಾವಿದರು ಅಭಿನಯಿಸಲಿದ್ದಾರೆ. ನಾಟಕ ಪ್ರದರ್ಶನ ಉಚಿತ ಎಂದರು.
ಈ ಸಂದರ್ಭದಲ್ಲಿ ಟ್ರಸ್ಟ್ ಮುಖಂಡರು ಉಪಸ್ಥಿತರಿದ್ದರು.