ಮಂಜುನಾಥ್ ಶೆಟ್ಟಿ…
ಶ್ರೀ ರಾಘವೇಂದ್ರ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವವು ದುರ್ಗಿಗುಡಿ ತಿಲಕ್‌ನಗರದ ಶ್ರೀ ರಾಯರ ಮಠದಲ್ಲಿ ಶ್ರದ್ಧಾಭಕ್ತಿಗಳಿಂದ ಆಗಸ್ಟ್ 29, 30 ಮತ್ತು 31ರ ಮೂರು ದಿನಗಳು ವಿಷೇಷವಾಗಿ ನಡೆಯಲಿದೆ.
ಆಗಸ್ಟ್ 29ರ ಶನಿವಾರ ಪೂರ್ವಾರಾಧನೆ, ಆಗಸ್ಟ್ 30ರ ಭಾನುವಾರ ಶ್ರೀ ಗುರುಗಳ ಪುಣ್ಯ ದಿನ (ಮಧ್ಯಾರಾಧನೆ) ಮತ್ತು ಆಗಸ್ಟ್ 31ರ ಸೋಮವಾರದಂದು ಉತ್ತರಾರಾಧನೆ ಹಾಗೂ ಬೆಳಿಗ್ಗೆ 11-30ಕ್ಕೆ ಮಹಾರಥೋತ್ಸವವು ನಡೆಯಲಿದೆ.
ಪ್ರತಿದಿನ ಬೆಳಿಗ್ಗೆ ವಿಶೇಷ ಅಭಿಷೇಕ, ಸರ್ವಸೇವೆ, ಪೂಜೆ ಹಾಗೂ ಸಂಜೆ ರಜತ ರಥೋತ್ಸವ, ಉಯ್ಯಾಲೆ ಸೇವೆ ಹಾಗೂ ಪ್ರಸಾದ ವಿನಿಯೋಗ ಇರುತ್ತದೆ. ಆಗಸ್ಟ್ 28ರ ಶುಕ್ರವಾರ ಹುಣ್ಣಿಮೆ ಬೆಳಿಗ್ಗೆ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಸಂಜೆ ಧ್ವಜಾರೋಹಣ, ಗೋಪೂಜೆ, ಲಕ್ಷ್ಮಿ ಪೂಜೆ ಹಾಗೂ ಧಾನ್ಯಪೂಜೆ ಇರುತ್ತದೆ.
ಶಿವಮೊಗ್ಗ ನಗರದ ಎಲ್ಲಾ ಭಕ್ತರು ಶ್ರದ್ದಾಭಕ್ತಿ ಮತ್ತು ಸೇವಾ ರೂಪಗಳಿಂದ ಶ್ರೀ ಗುರುರಾಯರ ಆರಾಧನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ಸೇವಾ ಸಮಿತಿ ಮುಖ್ಯಸ್ಥರಾದ ರಾಘವೇಂದ್ರ ಮೂರ್ತಿ ವಿನಂತಿಸಿದ್ದಾರೆ.