ಮಂಜುನಾಥ್ ಶೆಟ್ಟಿ…
ಉಡುಪಿಯ ಶ್ರೀ ಕೃಷ್ಣ ಮಠದ ದ್ವಾರದ ಎಲ್‌ಇಡಿ ಬೋರ್ಡ್ ಪ್ರದರ್ಶನ ಹಾಗೂ ಮಠದ ಒಳಾಂಗಣ ದೀಪಾಲಂಕಾರ ಕಾರ್ಯಗಳನ್ನು ಉದ್ಯಮಿ ಹಾಗೂ ಶಂಕರ್ ಎಲೆಕ್ಟ್ರಿಕಲ್ಸ್ ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಿಎಂಡಿ ರಾಜೇಶ್ ಶೆಟ್ಟಿ ಅವರು ಉಚಿತವಾಗಿ ನೆರವೇರಿಸಿದ್ದಾರೆ.ಶ್ರೀ ಕೃಷ್ಣನ ಪವಿತ್ರ ಸನ್ನಿಧಿಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ತಮ್ಮ ಪಾಲಿನ ಪುಣ್ಯದಾಯಕ ಹಾಗೂ ಸೌಭಾಗ್ಯದ ಕ್ಷಣ ಎಂದು ರಾಜೇಶ್ ಶೆಟ್ಟಿ ತಿಳಿಸಿದ್ದಾರೆ.
ನಾವು ಮಾಡುವ ಯಾವುದೇ ಸೇವೆ ಶ್ರೀ ಕೃಷ್ಣನ ಅನುಗ್ರಹದಿಂದಲೇ ಸಾಧ್ಯ. ಉಡುಪಿಯ ಶ್ರೀ ಕೃಷ್ಣನ ಪವಿತ್ರ ಸನ್ನಿಧಿಯಲ್ಲಿ ನಮ್ಮ ಸಂಸ್ಥೆಯ ಮೂಲಕ ಅಲ್ಪ ಸೇವೆಯನ್ನು ಸಲ್ಲಿಸಲು ಅವಕಾಶ ದೊರೆತಿರುವುದು ನನ್ನ ಭಾಗ್ಯ. ಈ ಸೇವೆಯನ್ನು ಭಗವಾನ್ ಶ್ರೀ ಕೃಷ್ಣನ ಪಾದಾರವಿಂದಗಳಿಗೆ ಭಕ್ತಿಪೂರ್ವಕವಾಗಿ ಸಮರ್ಪಿಸುತ್ತೇನೆ ಎಂದು ಅವರು ತಿಳಿಸಿದರು.