ಮಂಜುನಾಥ್ ಶೆಟ್ಟಿ…

ಶಿವಮೊಗ್ಗ: ವಿಧಾನ ಪರಿಷತ್ ಶಾಸಕರಾದ ಡಾ. ಧನಂಜಯ ಸರ್ಜಿ ಅವರ ‘ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ’ಯ ಅನುದಾನದಡಿ ಮಂಜೂರಾದ ನಗರದ ಪ್ರಮುಖ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಅಧಿಕೃತವಾಗಿ ಚಾಲನೆ ನೀಡಲಾಯಿತು. ಶಿವಮೊಗ್ಗ ನಗರ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಶಾಸಕರಾದ ಡಾ. ಧನಂಜಯ ಸರ್ಜಿ ಹಾಗೂ ಶ್ರೀ ಡಿ.ಎಸ್. ಅರುಣ್ ಅವರು ಗುದ್ದಲಿ ಪೂಜೆ ನೆರವೇರಿಸಿದರು.

ನಗರದ ಹೃದಯ ಭಾಗದಲ್ಲಿರುವ ಸಸ್ಯಾಹಾರಿ ಫುಡ್ ಕೋರ್ಟ್‌ನ ಸಮಗ್ರ ನವೀಕರಣಕ್ಕೆ ಈ ಯೋಜನೆಯಡಿ ವಿಶೇಷ ಅನುದಾನ ಕಲ್ಪಿಸಲಾಗಿದೆ. ಪ್ರತಿದಿನ ಆಗಮಿಸುವ ಸಾವಿರಾರು ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ಶುಚಿಯಾದ, ಸುಸಜ್ಜಿತ ಹಾಗೂ ಹೈಟೆಕ್ ವಾತಾವರಣದಲ್ಲಿ ಆಹಾರ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಈ ನವೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.

ಇದರ ಜೊತೆಗೆ, ನಗರದ ವಾಜಪೇಯಿ ಬಡಾವಣೆಯಲ್ಲಿ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ನೂತನ ‘ಯೋಗ ಹಾಗೂ ಧ್ಯಾನ ಮಂದಿರ’ ನಿರ್ಮಾಣಕ್ಕೂ ಇಂದು ಗುದ್ದಲಿ ಪೂಜೆ ನೆರವೇರಿಸಲಾಯಿತು. ಇಂದಿನ ಒತ್ತಡದ ಜೀವನದಲ್ಲಿ ಸಾರ್ವಜನಿಕರಿಗೆ ಆಧ್ಯಾತ್ಮಿಕ ಚಿಂತನೆ, ಮಾನಸಿಕ ನೆಮ್ಮದಿ ಹಾಗೂ ಯೋಗಾಭ್ಯಾಸಕ್ಕೆ ಸೂಕ್ತ ವೇದಿಕೆ ಕಲ್ಪಿಸುವ ಸದುದ್ದೇಶವನ್ನು ಈ ಮಂದಿರ ಹೊಂದಿದೆ.

ಈ ವೇಳೆ ಮಾಜಿ ಸುಡಾ ಅಧ್ಯಕ್ಷರಾದ ನಾಗರಾಜ್ ಅವರು, ಜ್ಞಾನೇಶ್ವರ್ ಅವರು, ನಗರ ಬಿಜೆಪಿ ಅಧ್ಯಕ್ಷರಾದ ಮೋಹನ್ ರೆಡ್ಡಿ ಅವರು, ಸಸ್ಯಹಾರಿ ಫುಡ್ ಕೋರ್ಟ್ ಅಧ್ಯಕ್ಷರಾದ ರಮೇಶ್ ಅವರು, ಪ್ರಮುಖರಾದ ನಾರಾಯಣ, ಧರ್ಮರಾಜ್, ಸಂಜೀವಣ್ಣ, ನವುಲೆ ಮಂಜುನಾಥ್, ಬ್ರಹ್ಮಕುಮಾರಿಸ್ ವಿಶ್ವವಿದ್ಯಾಲಯದ ರಾಜಯೋಗಿನಿ ಅನುಸೂಯಕ್ಕನವರು, ರಾಜಯೋಗಿನಿ ಸ್ನೇಹಕ್ಕ ಅವರು, ವಂದನಕ್ಕ ಅವರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *