ಮಂಜುನಾಥ್ ಶೆಟ್ಟಿ…
ಶಿವಮೊಗ್ಗ: ವಿಧಾನ ಪರಿಷತ್ ಶಾಸಕರಾದ ಡಾ. ಧನಂಜಯ ಸರ್ಜಿ ಅವರ ಜನ್ಮದಿನದ ಪ್ರಯುಕ್ತ, ಅವರ ಅಭಿಮಾನಿ ಬಳಗದ ವತಿಯಿಂದ ಇಂದು ನಗರದ ರವೀಂದ್ರನಗರ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಸ್ವಾತಿ ಅವರ ದಿವ್ಯಸಾನ್ನಿಧ್ಯದಲ್ಲಿ ಜರುಗಿದ ಈ ಭಕ್ತಿಪೂರ್ವಕ ಕಾರ್ಯಕ್ರಮದಲ್ಲಿ, ಶಾಸಕರ ಆಯುರಾರೋಗ್ಯ, ಯಶಸ್ಸು ಹಾಗೂ ಜನಸೇವೆಯ ಕಾರ್ಯಗಳಿಗೆ ಶುಭಕೋರಿ ವಿಘ್ನನಿವಾರಕ ಗಣಪತಿಗೆ ಮೋದಕ ನೈವೇದ್ಯ, ಪಂಚಾಮೃತ ಅಭಿಷೇಕ ಹಾಗೂ ಸರ್ವ ಸೇವಾ ವಿಶೇಷ ಪೂಜೆಯನ್ನು ಶ್ರದ್ಧಾಭಕ್ತಿಗಳಿಂದ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಶಿವಮೊಗ್ಗ ಗ್ರಾಮಾಂತರ ಅಧ್ಯಕ್ಷರಾದ ಸುರೇಶ್ ಸಿಂಗನಹಳ್ಳಿ, ಸರ್ಜಿ ಆಸ್ಪತ್ರೆಯ ವೈದ್ಯರಾದ ಡಾ. ವಿಜಯಕುಮಾರ್ ಮಾಯೆರ, ಆಡಳಿತಾಧಿಕಾರಿ ಮುರುಳೀಧರ್ ರಾವ್ ಕುಲಕರ್ಣಿ, ಸನ್‌ರೈಸ್ ಫೆಸಿಲಿಟಿ ಸರ್ವಿಸಸ್‌ನ ಮಾಲೀಕರಾದ ಸಿದ್ದೇಶ್, ಪ್ರಮುಖರಾದ ತಮ್ಮಡಿಹಳ್ಳಿ ನಾಗರಾಜ್, ಯತೀಶ್ ದುಮ್ಮಳ್ಳಿ, ಪೆರುಮಾಳ್, ಬಿ.ಡಿ. ಈಶ್ವರಪ್ಪ ಹಾಗೂ ಮಹಿಳಾ ಮುಖಂಡರಾದ ಗೀತಾ ಸೇರಿದಂತೆ ಅಭಿಮಾನಿಗಳು, ಹಿತೈಷಿಗಳು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು.