ಮಂಜುನಾಥ್ ಶೆಟ್ಟಿ…

ಸಂಚಾರಿ ಸಿಪಿಐ ದೇವರಾಜ್ ನೇತೃತ್ವದಲ್ಲಿ ನಗರದ ಶಂಕರಮಠ ಸರ್ಕಲ್ ಹಾಗೂ ಹೊಳೆ ಬಸ್ ನಿಲ್ದಾಣಗಳಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆಯನ್ನು ನಿಯಂತ್ರಿಸಿ, ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಶಂಕರಮಠ ಸರ್ಕಲ್‌ನ ಸಿಗ್ನಲ್‌ನಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಫ್ರೀ ಲೆಫ್ಟ್ ಸಮಯವನ್ನು ಹೆಚ್ಚಿಸಲಾಗಿದೆ. ಇದರಿಂದ ಸಿಗ್ನಲ್‌ನಲ್ಲಿ ವಾಹನಗಳ ಸರದಿ ಹಾಗೂ ಸಂಚಾರ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಿದೆ.
ಶಂಕರ ಮಠ ವೃತ್ತದಲ್ಲಿ ಫುಟ್ ಪಾತ್ ನಲಿ ಪಾದಚಾರಿಗಳಿಗೆ ಅನಾನುಕೂಲವಾಗಿದ್ದು ಬೋರ್ಡ್ ಗಳನ್ನು ತೆರವುಗೊಳಿಸಲಾಯಿತು. ಪಾದಚಾರಿಗಳಿಗೆ ಸುರಕ್ಷಿತವಾಗಿ ಸಂಚರಿಸಲು ಅನುಕೂಲವಾಗುವಂತೆ ಫುಟ್ ಪಾತ್ ತೆರವು ಗೊಳಿಸುವ ಕ್ರಮ ಕೈಗೊಳ್ಳಲಾಗಿದೆ.
ಹೊಳೆ ಬಸ್ ನಿಲ್ದಾಣದಲ್ಲಿಯೂ ಸಿಟಿ ಬಸ್‌ಗಳು ನಿಗದಿತ ಸ್ಥಳದಲ್ಲೇ ನಿಲುಗಡೆಗೊಳ್ಳುವಂತೆ ಬಸ್‌ವೇಗೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ಬಸ್‌ಗಳ ಅನಿಯಮಿತ ನಿಲುಗಡೆಯಿಂದ ಉಂಟಾಗುವ ಸಂಚಾರ ಸಮಸ್ಯೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ.