ಮಂಜುನಾಥ್ ಶೆಟ್ಟಿ…

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 76ನೇ ಜನ್ಮದಿನೋತ್ಸವದ ಅಂಗವಾಗಿ ದೇಶಾದ್ಯಂತ ಹಮ್ಮಿಕೊಳ್ಳಲಾಗಿರುವ ‘ಸೇವಾ ಸಂಕಲ್ಪ’ ಅಭಿಯಾನದ ಪ್ರಯುಕ್ತ, ದೀನ್ ದಯಾಳ್ ಟ್ರಸ್ಟ್ ವತಿಯಿಂದ ನಗರದಲ್ಲಿ ಆಯೋಜಿಸಲಾಗಿದ್ದ ವಿಕಸಿತ ಭಾರತಕ್ಕಾಗಿ ಸೈಕಲ್ ಜಾಥಾ ಕಾರ್ಯಕ್ರಮವನ್ನು ಮಾಜಿ ಸಚಿವರು ಬೆಂಗಳೂರು ರಾಜಾಜಿನಗರದ ಶಾಸಕರಾದ ಸುರೇಶ್ ಕುಮಾರ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಎನ್ ಕೆ ಜಗದೀಶ್, ಶಿವಮೊಗ್ಗ ನಗರ ಶಾಸಕರಾದ ಎಸ್ ಎನ್ ಚನ್ನಬಸಪ್ಪ,ನಗರಾಧ್ಯಕ್ಷರಾದ ಶ್ರೀ ಮೋಹನ್ ರೆಡ್ಡಿ, ರಾಜ್ಯ ಪ್ರಕೋಷ್ಟಗಳ ಸಂಯೋಜಕರಾದ ಶ್ರೀ ಎಸ್.ದತ್ತಾತ್ರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ನಾಗರಾಜ್, ಪ್ರಮುಖರಾದ ಶ್ರೀ ಜ್ಯೋತಿ ಪ್ರಕಾಶ್, ಸೈಕಲ್ ಜಾಥಾ ಪ್ರಮುಖರಾದ ಜಿಲ್ಲಾ ಮಾಧ್ಯಮದ ಚಂದ್ರಶೇಖರ್ ಎಸ್, ಮಂಜುನಾಥ್ ಎನ್, ನಗರ ಮಾಧ್ಯಮದ ಶ್ರೀನಾಗ್, ನಗರ ಸೋಷಿಯಲ್ ಮೀಡಿಯಾದ ಮುರಳಿ ಸೇರಿದಂತೆ ಜಿಲ್ಲಾ ಹಾಗೂ ನಗರದ ಗೌರವಾನ್ವಿತ ಪದಾಧಿಕಾರಿಗಳು, ಮುಖಂಡರು ಮತ್ತು ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *