ಮಂಜುನಾಥ್ ಶೆಟ್ಟಿ…
ಶಿವಮೊಗ್ಗ ದಸರಾ 2026ರ ಮಹೋತ್ಸವದ ಸಂದರ್ಭದಲ್ಲಿ ಅಂಬಾರಿ ಹೊತ್ತ ಸಕ್ರೆಬೈಲು ಸೋಮಣ್ಣ ಆನೆಯು ಮೆರವಣಿಗೆಯಲ್ಲಿ ಓಡಿದ ಆತಂಕಕಾರಿ ಘಟನೆಯ ವೇಳೆ, ಮಾವುತರು ಮತ್ತು ಕಾವಾಡಿಗರು ತಮ್ಮ ಜೀವದ ಹಂಗು ತೊರೆದು ಪರಿಸ್ಥಿತಿಯನ್ನು ನಿಯಂತ್ರಿಸಲು ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ಶ್ರಮಿಸಿದರು.
ಈ ಸಂದರ್ಭದಲ್ಲಿ ಅವರ ಧೈರ್ಯ, ಕರ್ತವ್ಯನಿಷ್ಠೆ ಮತ್ತು ಸೇವೆಯನ್ನು ಗುರುತಿಸಿ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್. ಷಡಾಕ್ಷರಿಯವರು ಹಾಗೂ ಜಿಲ್ಲಾಧ್ಯಕ್ಷರಾದ ಆರ್ ಮೋಹನ್ ಕುಮಾರ್ ರವರು ಅಭಿನಂದಿಸಿ ಗೌರವಿಸಿದರು.
ಮಾವುತರು ಮತ್ತು ಕಾವಾಡಿಗರು ವಿಶೇಷ ಭತ್ಯೆ, ವೈದ್ಯಕೀಯ ವಿಮೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿಗಳಾದ ಆರ್ ಪಾಪಣ್ಣ, ಖಜಾಂಚಿಗಳಾದ ಡಾ. ಸಿ.ಎ. ಹಿರೇಮಠ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.