ಮಂಜುನಾಥ್ ಶೆಟ್ಟಿ…
ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ ಕೊನೆಗೂ ವರ್ಗಾವಣೆಯಾಗಿದ್ದಾರೆ.ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆಯಿಂದ ಶಿವಮೊಗ್ಗ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ನಿರಂತರ ಕಳೆದ ಒಂದುವರೆ ವರ್ಷದಿಂದ ಶಿವಮೊಗ್ಗ ಅರಣ್ಯ ಇಲಾಖೆಯ ವೈಫಲ್ಯಗಳನ್ನು ಕರವೇ ಸಿಂಹ ಸೇನೆಯು ಸಾರ್ವಜನಿಕವಾಗಿ ಹೋರಾಡುವುದರ ಮೂಲಕ ರಾಜ್ಯ ಸರ್ಕಾರಕ್ಕೆ ಮತ್ತು ಅರಣ್ಯ ಸಚಿವರಿಗೆ ನಿರಂತರ ಮನವಿಗಳನ್ನು ಮತ್ತು ಪ್ರತಿಭಟನೆ ಮಾಡುತ್ತಲೇ ಬಂದಿತ್ತು.
ಇತ್ತೀಚೆಗೆ ನಡೆದ ದಸರಾ ಆನೆ ಅಂಬಾರಿ ಅವಘಡಕ್ಕೆ ವನ್ಯಜೀವಿ ವಿಭಾಗದ ಡಿ ಸಿ ಎಫ್ ಪ್ರಸನ್ನ ಕೃಷ್ಣ ಪಟಗಾರ್ ಕಾರಣಿಕರ್ತ ರು ಎಂದು ನೇರ ಆರೋಪಿಸಿ ಅವರನ್ನು ಕೆಲಸದಿಂದ ವಜಾ ಗೊಳಿಸಬೇಕು ಅಥವಾ ಶಿವಮೊಗ್ಗ ಜಿಲ್ಲೆಯಿಂದ ವರ್ಗಾವಣೆ ಮಾಡಬೇಕೆಂದು ದೊಡ್ಡ ಮಟ್ಟದಲ್ಲಿ ಹೋರಾಟವನ್ನು ನಡೆಸಿದಿದ್ದರು.ಇದೀಗ ಶಿವಮೊಗ್ಗ ವನ್ಯಜೀವಿ ವಿಭಾಗದ ಡಿ ಸಿ ಎಫ್ ಪ್ರಸನ್ನ ಕೃಷ್ಣ ಪಟಗಾರ ರವರನ್ನು ಬೇರೆ ಕಡೆಗೆ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದ್ದು ಸಂಘಟನೆಯ ಹೋರಾಟಕ್ಕೆ ಸಿಕ್ಕ ಸಂದ ಜಯ ಎಂದು ಕರವೇ ಸಿಂಹ ಸೇನೆಯ ರಾಜ್ಯಾಧ್ಯಕ್ಷ ರವಿಪ್ರಸಾದ್ ಎಂ ಎಂದು ತಿಳಿಸಿದರು.
ಸಿಂಹ ಸೇನೆಯು ನ್ಯಾಯಪರ ಹೋರಾಟದಲ್ಲಿ ನಂಬಿಕೆಯನ್ನು ಇಟ್ಟುಕೊಂಡು ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನು ತೀವ್ರ ಗೊಳಿಸುತ್ತಾ ಅರಣ್ಯ ಇಲಾಖೆಯ ಇನ್ನೂ ಹಲವಾರು ವೈಫಲ್ಯಗಳಿಗೆ ಕಾರಣವಾಗಿರುವ ಅಧಿಕಾರಿಗಳ ವಿರುದ್ಧ ತಮ್ಮ ಹೋರಾಟವನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.ಪ್ರಸನ್ನ ಕೃಷ್ಣಪಟಗಾರ್ ವರ್ಗಾವಣೆಯು ಪ್ರಾಣಿ ಪ್ರಿಯರಿಗೆ ಮತ್ತು ಸಾರ್ವಜನಿಕರಿಗೆ ಸಮಾಧಾನವನ್ನು ಉಂಟು ಮಾಡಿದೆ ಎಂದು ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಮಧುಸೂದನ್ ಎಸ್ಎಂ ರವರು ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ರಾಜ್ಯ ಸರ್ಕಾರ ಈ ಕೂಡಲೇ ಸಮಗ್ರ ತನಿಖೆ ನಡೆಸಲು ನ್ಯಾಯಾಂಗ ತನಿಖೆಯನ್ನು ಮಾಡಬೇಕೆಂದು ಆಗ್ರಹಿಸಿದರು. ಹೋರಾಟದಲ್ಲಿ ಸಹಕಾರಿಯದಂತಹ ಪರಿಸರ ಪ್ರೇಮಿಗಳು ಮತ್ತು ವನ್ಯಜೀವಿ ಪ್ರಾಣಿ ಪ್ರಿಯರಿಗೆ ಧನ್ಯವಾದ ತಿಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಭಿಜಿತ್ ನವಲೆ , ಜಿಲ್ಲಾ ಉಪಾಧ್ಯಕ್ಷರಾದ ನಯಾಜ್, ರಘು, ನೂರುಲ್ಲಾ .ಜಿಲ್ಲಾ ಸಹಕಾರಿದರ್ಶಿಯಾದ ಶಿವಕುಮಾರ್, ಲಿಂಗಪ್ಪ ರಫೀಕ್ ಮತ್ತಿತರರು ಪಾಲ್ಗೊಂಡಿದ್ದರು.