ಮಂಜುನಾಥ್ ಶೆಟ್ಟಿ…
ಸಂಚಾರಿ ಸಿಪಿಐ ದೇವರಾಜ್ ಅವರು ಶಿವಮೊಗ್ಗ ನಗರದ ಪಾರ್ಕ್ ಬಡಾವಣೆಯಲ್ಲಿರುವ ಖಾಸಗಿ ಆಸ್ಪತ್ರೆಗಳಿಗೆ ಮಹಾನಗರ ಪಾಲಿಕೆಯ ಅಧಿಕಾರಿಗಳೊಂದಿಗೆ ಖುದ್ದಾಗಿ ಭೇಟಿ ನೀಡಿದರು. ನಂತರ ಆಯಾ ಆಸ್ಪತ್ರೆಗಳ ಕಟ್ಟಡದ ಅನುಮೋದಿತ ನಕ್ಷೆಯ ಪ್ರಕಾರ ವಾಹನಗಳ ಪಾರ್ಕಿಂಗ್ಗಾಗಿ ಮೀಸಲಿಟ್ಟಿರುವ ಸ್ಥಳಗಳ ಕುರಿತು ಪರಿಶೀಲನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕಟ್ಟಡದ ಅನುಮೋದಿತ ನಕ್ಷೆಯ ಪ್ರಕಾರ ವಾಹನಗಳ ಪಾರ್ಕಿಂಗ್ಗಾಗಿ ಸ್ಥಳಾವಕಾಶ ಮೀಸಲಿಟ್ಟಿರುವ ಆಸ್ಪತ್ರೆಯ ಆಡಳಿತ ಮಂಡಳಿಯವರಿಗೆ, ಸದರಿ ಸ್ಥಳವನ್ನು ಕಡ್ಡಾಯವಾಗಿ ವಾಹನಗಳ ಪಾರ್ಕಿಂಗ್ ಉದ್ದೇಶಕ್ಕಾಗಿಯೇ ಬಳಸಬೇಕು ಹಾಗೂ ಬೇರೆ ಯಾವುದೇ ಉದ್ದೇಶಕ್ಕೆ ಬಳಸದಂತೆ ಸೂಚನೆ ನೀಡಲಾಯಿತು.
ಅದೇ ರೀತಿ, ಅನುಮೋದಿತ ಕಟ್ಟಡದ ನಕ್ಷೆಯ ಪ್ರಕಾರ ವಾಹನಗಳ ಪಾರ್ಕಿಂಗ್ಗೆ ಅಗತ್ಯ ಸ್ಥಳಾವಕಾಶವನ್ನು ಒದಗಿಸದ ಆಸ್ಪತ್ರೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗೆ ವರದಿ ಸಲ್ಲಿಸಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.