ಶಿವಮೊಗ್ಗ: ಗ್ಯಾಸ್ ಬೆಲೆ ಇಳಿಕೆ ಮಾಡಬೇಕು, ಪೊಲೀಸರ ವಿಪರೀತ ದಂಡ ಪ್ರಕ್ರಿಯೆ ನಿಲ್ಲಿಸಬೇಕೆಂದು ಆಗ್ರಹಿಸಿ ಶಿವಮೊಗ್ಗ ನಗರ ಆಟೋ ಚಾಲಕರ ಮತ್ತು ಮಾಲೀಕರ ಸಂಘದಿಂದ ಇಂದು ಪ್ರತಿಭಟನೆ ನಡೆಸಲಾಯಿತು.

ನಗರದಲ್ಲಿ ಪೊಲೀಸರು ಆಟೋಗಳಿಗೆ ವಿಪರೀತ ದಂಡ ಹಾಕುತ್ತಿದ್ದು, ಇದನ್ನು ಕಡಿಮೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪೊಲೀಸರು ಫೋಟೋ ತೆಗೆದು ದಂಡ ಹಾಕುವ ಪ್ರಕ್ರಿಯೆ ಹೆಚ್ಚಾಗಿದೆ. ಗ್ಯಾಸ್ ಬೆಲೆ ಕೂಡ ಏರಿಕೆಯಾಗಿರುವುದರಿಂದ ಮನೆಗೆ ಸಂಪಾದನೆ ತೆಗೆದುಕೊಂಡು ಹೋಗಲು ಕಷ್ಟವಾಗುತ್ತಿದೆ. ಪೊಲೀಸರ ದಂಡ ಪ್ರಕ್ರಿಯೆ ಮತ್ತು ಗ್ಯಾಸ್ ಬೆಲೆ ಹೆಚ್ಚಳದಿಂದ ಜೀವನ ನಡೆಸುವುದು ಕಷ್ಟವಾಗಿದೆ. ಮಕ್ಕಳ ಶಿಕ್ಷಣ ಜೀವನ ನಿರ್ವಹಣೆ, ತಂದೆ, ತಾಯಿಗಳಿಗೆ ಔಷಧಿ ಕೊಡಿಸಲು ಕೂಡ ಸಾಧ್ಯವಾಗುತ್ತಿಲ್ಲ.

ಈ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.ಪೊಲೀಸರು ಫೋಟೋ ತೆಗೆದು 1000 ರೂಪಾಯಿ ದಂಡ ಹಾಕುತ್ತಿದ್ದು, ಬಡ ಆಟೋ ಚಾಲಕರು ದುಡಿಮೆ ಮಾಡಿದ ಹಣವನ್ನು ದಂಡಕ್ಕೆ ಕಟ್ಟಿ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿ ಕೊಳ್ಳುವಂತಹ ಪರಿಸ್ಥಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ನ್ಯಾಯ ಕೊಡಿಸಬೇಕೆಂದು ಮನವಿ ಮಾಡಿದ್ದಾರೆ.ಈ ಸಂದರ್ಭದಲ್ಲಿ ನಗರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷ ಅನ್ಸರ್ ಅಹಮ್ಮದ್, ಅಲ್ಲಾಭಕಷ್, ಶಾಂತಕುಮಾರ್ ಗೌಡ, ರಿಯಾಜ್, ಪುರುಷೋತ್ತಮ್, ಸಂತೋಷ್ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…