ಶಿವಮೊಗ್ಗ: ವಿದ್ಯಾರ್ಥಿಗಳಲ್ಲಿ ನೂತನ ಶಿಕ್ಷಣ ನೀತಿಯ ಬಗ್ಗೆ ಜಾಗೃತಿ ಅವಶ್ಯಕತೆ ಇದೆ. ಶಿಕ್ಷಣದ ಜೊತೆಗೆ ಸಾಮಾನ್ಯ ಜ್ಞಾನದ ಅರಿವು ಕೂಡ ವಿದ್ಯಾರ್ಥಿಗಳಲ್ಲಿ ಇರಬೇಕು ಎಂದು ವಿಧಾನ ಪರಿಷತ್ ನೂತನ ಸದಸ್ಯ ಡಿ.ಎಸ್. ಅರುಣ್ ಹೇಳಿದ್ದಾರೆ.

ಅವರು ಇಂದು ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜ್ ಶಿವಮೊಗ್ಗ, ಮತ್ತು ಎನ್.ಎಸ್.ಎಸ್. ಘಟಕ 1, 2, 3 ಹಾಗೂ ಯುವ ರೆಡ್ ಕ್ರಾಸ್ ಘಟಕ ಹಾಗೂ ಐಕ್ಯೂಎಸಿ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ಇ- ಗವರ್ನೆನ್ಸ್, ಆರ್.ಟಿ.ಐ., ಸೆಂಟ್ರಲ್ ವಿಜಿಲೆನ್ಸ್ ಕಮಿಷನ್ ಬಗ್ಗೆ ಜಾಗೃತಿ ಕಾರ್ಯಕ್ರ ಉದ್ಘಾಟಿಸಿ ಅವರು ಮಾತನಾಡಿದರು.ನನಗೆ ಆಸಕ್ತಿ ಇರುವ, ಬೇಕಾಗಿರುವ ವಿಷಯವನ್ನು ಕಲಿಯುವುದು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶವಾಗಿದೆ. ಕಾಲೇಜ್ ದಿನಗಳ ಗೋಲ್ಡನ್ ಲೈಫ್ ಆಗಿದ್ದು, ಜೀವನ ಯಾವ ರೀತಿ ಇರಬೇಕೆಂದು ರೂಪುರೇಷೆ ಹಾಕುವ ಸಮಯವಾಗಿದೆ. ಇವತ್ತಿನ ಸಂದರ್ಭದಲ್ಲಿ ಶಿಕ್ಷಣ ನೀತಿ ಬದಲಾವಣೆ ಅವಶ್ಯಕತೆ ಮನಗಂಡು ಪ್ರಧಾನಿ ನೂತನ ಶಿಕ್ಷಣ ನೀತಿ ರೂಪಿಸಿದ್ದಾರೆ ಎಂದರು.

ಹಿಂದೆ ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಉನ್ನತ ಶಿಕ್ಷಣ ಪಡೆಯುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದ್ದು, ಗಂಡು ಮಕ್ಕಳಿಗೆ ಸರಿಸಮಾನರಾಗಿ ಶಿಕ್ಷಣದ ಪ್ರಮಾಣ ಕೂಡ ಹೆಣ್ಣುಮಕ್ಕಳು ಹೆಚ್ಚಾಗಿ ಪಡೆಯುತ್ತಿದ್ದಾರೆ. ಹೆಚ್ಚಿನ ಅಂಕಗಳನ್ನು ಪಡೆಯುತ್ತಿದ್ದಾರೆ. ನಮ್ಮ ದೇಶದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಹಾಗೂ ಸಂವಿಧಾನದ ಬಗ್ಗೆ ವಿದ್ಯಾರ್ಥಿಗಳು ತಿಳಿಯುವ ಅವಶ್ಯಕತೆ ಇದೆ. ಎಲ್ಲಾ ರಂಗಕ್ಕೂ ನ್ಯಾಯ ಒದಗಿಸಬೇಕೆಂದು ಪ್ರಧಾನಿವರಯ ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಎಂದರು.ಸೆಂಟ್ರಲ್ ವಿಜಿಲೆನ್ಸ್ ಕಮಿಷನ್ ಮೂಲಕ ಇಡೀ ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುವ ಕೆಲಸವಾಗುತ್ತಿದೆ.

ಪಾರ್ಲಿಮೆಂಟ್ ಎಂಬುದು ದೇವಸ್ಥಾನ ಇದ್ದ ಹಾಗೆ ಎಂದು ಒಳಗೆ ಪ್ರವೇಶಿಸುವಾಗ ನಮಸ್ಕರಿಸಿದ ಪ್ರಧಾನಿ ಮೋದಿ ದೇಶದ ಅರ್ಥ ವ್ಯವಸ್ಥೆ ಬಲಪಡಿಸಲು ಕ್ರಮಕೈಗೊಂಡಿರುವುದಲ್ಲದೇ ನಾನು ತಿನ್ನಲ್ಲ, ತಿನ್ನಲು ಬಿಡುವುದಿಲ್ಲ ಎಂದು ಜನ ಸಾಮಾನ್ಯರಿಗೆ ಸಿಗುವ ಸೌಲಭ್ಯಗಳು ಭ್ರಷ್ಟರ ಪಾಲಾಗಬಾರದೆಂದು ಇ –ಗವರ್ನೆನ್ಸ್ ವ್ಯವಸ್ಥೆಯ ಮೂಲಕ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ತಲುಪುವ ವ್ಯವಸ್ಥೆ ಮಾಡಿದ್ದಾರೆ. ದೇಶದ ಎಲ್ಲಾ ಕಚೇರಿಗಳು ಡಿಜಿಟಲೈಸೇಷನ್ ಆಗುತ್ತಿವೆ. ಸಣ್ಣ ಪುಟ್ಟ ಪಂಚಾಯಿತಿಗಳು ಇ –ಆಫೀಸ್ ಆಗಿ ಕೆಲಸ ನಿರ್ವಹಿಸುತ್ತಿವೆ ಎಂದರು.ಆರ್.ಟಿ.ಐ. ಸಮಪರ್ಕವಾಗಿ ಕೆಲಸ ಮಾಡಲು ಸೂಚನೆ ನೀಡಲಾಗಿದ್ದು, ಮಾಹಿತಿ ಹಕ್ಕಿನ ಮೂಲಕ ಭ್ರಷ್ಟಾಚಾರ ನಿಯಂತ್ರಣಕ್ಕೆ ಅವಕಾಶ ನೀಡಲಾಗಿದೆ ಎಂದರು.

ಸಾಧನೆಗೆ ಗುರಿ ಇರಬೇಕು ವಿದ್ಯಾರ್ಥಿಗಳಿಗೆ ಕಷ್ಟಪಟ್ಟರೆ ತುಂಬಾ ಅವಕಾಶಗಳಿವೆ. ಈ ದೇಶದ ಜವಾಬ್ದಾರಿಯುತ ನಾಗರಿಕರಾಗಿ ಎಂದು ಅವರು ಕರೆ ನೀಡಿದರು.ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವೆಂಕಟೇಶ್ ರಾವ್ ಭಾಗವಹಿಸಿದ್ದರು. ಪ್ರಮುಖರಾದ ಅಶ್ವತ್ಥನಾರಾಯಣ ಶೆಟ್ಟಿ, ರೊ.ವಿಜಯಕುಮಾರ್, ಡಾ. ನಾಗರಾಜ್ ಪರಿಸರ, ಪ್ರಾಂಶುಪಾಲ ಹೆಚ್.ಎಂ. ಸುರೇಶ್, ಪ್ರೊ. ಎಸ್, ಜಗದೀಶ್, ಪ್ರೊ. ನಾಗರಾಜ್, ಪ್ರೊ. ಖಾಜೀಂ ಶರೀಫ್, ಪ್ರೊ. ಎನ್. ಮಂಜುನಾಥ್ ಮೊದಲಾದವರಿದ್ದರು. ಈ ಸಂದರ್ಭದಲ್ಲಿ ಡಿ.ಎಸ್. ಅರುಣ್ ಅವರನ್ನು ಸನ್ಮಾನಿಸಲಾಯಿತು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…