ಶಿವಮೊಗ್ಗ: ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸಬೇಕೆಂದು ಆಗ್ರಹಿಸಿ ಇಂದು ಟೀ ಮಾರಾಟ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಲಾಯಿತು.

ಜಾಹೀರಾತು…ನಮಸ್ತೆ 🙏
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ 2021-23 ಸಾಲಿನ ಆಡಳಿತ ಮಂಡಳಿ ಚುನಾವಣೆ ಡಿಸೆಂಬರ್ 26 ಭಾನುವಾರ ನಡೆಯಲಿದೆ.. ಈ ಆಡಳಿತ ಮಂಡಳಿಯ ಚುನಾವಣೆಗೆ ಪರಿವರ್ತನಾ -XI ಸಮೂಹ ದಿಂದ ಶ್ರೀ ಸಾಯಿರಾಂ ಅಟೊಮೋಬೈಲ್ ಮಾಲೀಕರಾದ ಗೋಪಿ ಎಂ ಎಂ ಇವರು ಲಾರಿ ಮತ್ತು ಬಸ್ಸು ವಾಹನಗಳ ಬಿಡಿಭಾಗಗಳ ಮಾರಾಟ ಗಾರರು, ಆಟೊ ಕಾಂಪ್ಲೆಕ್ಸ್ ಮಾಲೀಕರ ಸಂಘದ ನಿರ್ದೇಶಕರು, ಅಲ್ಲದೆ ಏಕಲವ್ಯ ಪ್ರಶಸ್ತಿ ವಿಜೇತರು, ಕಲ್ಪತರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ , ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಚುನಾವಣೆಗೆ ಪ್ರತಿನಿಧಿಸುತ್ತಿದ್ದಾರೆ.. ಇವರ ಕ್ರಮಸಂಖ್ಯೆ 3 ದಯಮಾಡಿ ಈ ಕ್ರಮ ಸಂಖ್ಯೆಗೆ ಅಮೂಲ್ಯವಾದ ಮತವನ್ನು ಮಾಡಬೇಕಾಗಿ ವಿನಂತಿಸುತ್ತೇನೆ . 🙏

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ನೇತೃತ್ವದಲ್ಲಿ ಹೋರಾಟ ಕೈಗೊಳ್ಳಲಾಗಿದೆ. ತಮ್ಮ ಬೇಡಿಕೆ ಈಡೇರಿಸುವಂತೆ ಕಳೆದ 6 ದಿನಗಳಿಂದ ಧರಣಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರು ಟೀ ಮಾರಾಟ ಮಾಡಿ ಗಮನಸೆಳೆದರು.ರಾಜ್ಯದ 430 ಪ್ರಥಮದರ್ಜೆ ಕಾಲೇಜುಗಳಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಜೀವನ ಭದ್ರತೆಯೇ ಇಲ್ಲವಾಗಿದೆ. ಸರ್ಕಾರದ ಸೌಲಭ್ಯಗಳ್ಯಾವು ಅವರಿಗೆ ಸಿಗುತ್ತಿಲ್ಲ. ಅತಿಥಿ ಉಪನ್ಯಾಸಕರ ಸೇವೆಯನ್ನು ನಿಯಮ 14 ರ ಅಡಿಯಲ್ಲಿ ವಿಲೀನಗೊಳಿಸಬೇಕು. ಅವರನ್ನು ಕಾಯಂಗೊಳಿಸಬೇಕು.

ಕಾಯಂಗೊಳಿಸುವವರೆಗೂ ಅಂದರೆ ಸೇವಾ ವಿಲೀನ ಪ್ರಕ್ರಿಯೆ ಪೂರ್ಣಗೊಳಿಸುವವರೆಗೂ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಧಿಸೂಚನೆಯನ್ನು ತಡೆಯಬೇಕು ಎಂದು ಆಗ್ರಹಿಸಿದರು. ಇಲ್ಲದಿದ್ದರೆ ಅತಿಥಿ ಉಪನ್ಯಾಸಕರು ಹೀಗೆ ಮಜ್ಜಿಗೆ ಮಾರಾಟ ಮಾಡಿ ಜೀವನ ಸಾಗಿಸಬೇಕಾಗುತ್ತದೆ ಎಂದು ಅಳಲು ತೋಡಿಕೊಂಡರು.ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಾ. ಹೆಚ್. ಸೋಮಶೇಖರ್ ಶಿಮೊಗ್ಗಿ, ಚಂದ್ರಪ್ಪ, ಸತೀಶ್ ಕುಮಾರ್, ಧನಂಜಯ ಸ್ವಾಮಿ, ರೂಪಾ, ಡಾ. ಅನ್ನಪೂರ್ಣ, ದೀಪಾ, ಕೋಮಲಾ, ಡಾ. ಶೀಲಾ, ಜಿಲ್ಲಾಧ್ಯಕ್ಷ ಸರ್ವಜ್ಞಮೂರ್ತಿ, ಸತೀಶ್, ಖಜಾಂಚಿ ರಾಜೇಶ್ ಕುಮಾರ್ ಮೊದಲಾದವದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…