ದಿನಾಂಕ:೧೮.೦೧.೨೦೨೨ರಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಛೇರಿಗೆ ಜಿಲ್ಲೆಗೆ ನೂತನವಾಗಿ ಆಗಮಿಸಿರುವ ಜಿಲ್ಲಾಧಿಕಾರಿಯವರು ಡಾ. ಆರ್. ಸೆಲ್ವಮಣಿರವರು ಬೇಟಿ ನೀಡಿ ಆಡಳಿತ ಮಂಡಳಿಯೊಂದಿಗೆ ಜಿಲ್ಲೆಯ ಹಲವಾರು ಅಭಿವೃದ್ದಿ ಕಾರ್ಯಗಳ ಕುರಿತು ಸಂವಾದ ಕಾರ್ಯಕ್ರಮ ನಡೆಸಿ, ಮನವಿ ಸಲ್ಲಿಸಲಾಯಿತು. ಮನವಿಗೆ ಸ್ಪಂದಿಸಿದ ಮಾನ್ಯ ಜಿಲ್ಲಾಧಿಕಾರಿಗಳು ಆದ್ಯತೆಯ ಮೇರೆಗೆ ಜಿಲ್ಲೆಯ ಅಭಿವೃದ್ದಿ ಕಾರ್ಯಗಳ ಬಗ್ಗೆ ಕ್ರಮವಹಿಸುವುದಾಗಿ ತಿಳಿಸಿದರು.
ಟ್ರಕ್-ಟರ್ಮಿನಲ್ ಯಾರ್ಡ್ ಸ್ಥಾಪನೆ ಕುರಿತು ಯೋಜನೆಗೆ ೫೦ ಎಕರೆ ಜಾಗವನ್ನು ಅಕ್ಕಪಕ್ಕದ ತಾಲ್ಲೂಕುಗಳಿಂದ ಗುರುತಿಸಿ ಮಂಜೂರು ಮಾಡುವುದಾಗಿ ತಿಳಿಸಿದರು. ಸಿಟಿ-ಬಸ್ ಸ್ಟ್ಯಾಂಡ್ ನಿರ್ಮಾಣದ ಕುರಿತು ನಗರ ಸಾರಿಗೆ ವಾಹನಗಳಿಗೆ ಒಂದು ಮುಖ್ಯ ಬಸ್-ಸ್ಟ್ಯಾಂಡ್, ಸರ್ಕಾರಿ ಮತ್ತು ಪ್ರೈವೇಟ್ ಬಸ್-ಸ್ಟ್ಯಾಂಡ್‌ಗೆ ಹೊಂದಿಕೊಂಡಂತೆ ಸಮೀಪದಲ್ಲಿ ಒಂದು ಸಿಟಿ-ಬಸ್‌ಸ್ಟ್ಯಾಂಡನ್ನು ನಿರ್ಮಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಗಮನಹರಿಸುವುದಾಗಿ ತಿಳಿಸಿದರು. ಕುವೆಂಪು ರಂಗಮಂದಿರ ನವೀಕರಣ ಮತ್ತು ಉನ್ನೀಕರಣ ಮಾಡುವ ಬಗ್ಗೆ ಈಗಾಗಲೆ ಈ ಯೋಜನೆ ಸರ್ಕಾರದ ಮಟ್ಟದಲ್ಲಿದ್ದು ಅದನ್ನು ಶೀಘ್ರವಾಗಿ ಕಾರ್ಯಗತಗೊಳಿಸುವುದಾಗಿ ತಿಳಿಸಿದರು.
ಸಂಘದಿಂದ ಬಹುಹಂತದ ತಂತ್ರಜ್ಞಾನ ಕೌಶಲ್ಯ ಕೇಂದ್ರ ಸ್ಥಾಪನೆಗೆ ಬಗ್ಗೆ ಸಂಘಕ್ಕೆ ಸರ್ಕಾರದಿಂದ ೪ ಎಕರೆ ಜಾಗವನ್ನು ಮಂಜೂರು ಮಾಡುವ ಬಗ್ಗೆ ಯೋಜನಾ ವರದಿಯನ್ನು ಸಲ್ಲಿಸಲು ತಿಳಿಸಿದರು. ಇ-ವೇಸ್ಟ್ ಕಾರ್ಯಾಚರಣೆ ಯೋಜನೆ ಅತ್ಯಾವಶ್ಯಕ ಯೋಜನೆಯಾಗಿದ್ದು ಪ್ಳಸ್ಟಿಕ್ ಮತ್ತು ಒಣ ತ್ಯಾಜ್ಯದ ಬಗ್ಗ್ಗೆ ವಿಶೇಷ ಸಭೆ ಕರೆದು ಚಚಿsಸುವುದಾಗಿ ತಿಳಿಸಿದರು. ಈ ಕುರಿತು ಕೈಗಾರಿಕೋದ್ಯಮಿಗಳು ಯರಾದರೂ ಮುಂದೆ ಬಂದಲ್ಲಿ ಸರ್ಕಾರದ ಮಟ್ಟದಲ್ಲಿ ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಸ್ಮಾರ್ಟ್‌ಸಿಟಿ ಯೋಜನೆಗೆ ಸಂಬಂದಿಸಿದಂತೆ ಕಾಮಗಾರಿಗಳ ಪರಿವೀಕ್ಷಣೆ ಮಾಡಿ ಮುಂದಿನ ದಿನಗಳಲ್ಲಿ ಸೂಕ್ತ ನಿರ್ದಾರ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಜಿಲ್ಲೆಯ ಹಬ್ಬವಾದ ಸಾಂಸ್ಕೃತಿಕ ಹಬ್ಬವಾದ ಸಹ್ಯಾದ್ರಿ ಉತ್ಸವವನ್ನು ಕೋರೋನ ಉಲ್ಭಣದ ಹಿನ್ನೆಲೆಯಲ್ಲಿ ಸದ್ಯಕ್ಕೆ ಮುಂದೆ ಹಾಕಿ ಕೋರೋನ ಇಳಿಮುಖವಾದ ನಂತರ ಯೋಚಿಸುವುದಾಗಿ ತಿಳಿಸಿದರು ಶಿವಮೊಗ್ಗ ಜಿಲ್ಲೆಯು ಪ್ರವಾಸೋದ್ಯಮದ ತಾಣವಾಗಿದ್ದು, ಸರ್ಕಾರದಿಂದ ನೂತನ ಪ್ರವಾಸೋದ್ಯಮ ನೀತಿ ಜಾರಿಗೆ ಬರುತ್ತಿದ್ದು ಈ ಬಗ್ಗೆ ಪ್ರವಾಸೋದ್ಯಮದ ಯೋಜನೆಯಲ್ಲಿ ಆಸಕ್ತಿ ಇರುವ ಹೂಡಿಕೆದಾರರನ್ನು ಆಕರ್ಷಿಸಲು ಇನ್‌ವೆಸ್ಟರ್‍ಸ್ ಮೀಟ್ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಎನ್.ಗೋಪಿನಾಥ್, ಉಪಾಧ್ಯಕ್ಷರಾದ ಬಿ. ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹ-ಕಾರ್ಯದರ್ಶಿ ಜಿ. ವಿಜಯಕುಮಾರ್, ಖಜಾಂಚಿ ಯು. ಮಧುಸೂಧನ ಐತಾಳ್, ನಿರ್ದೇಶಕರುಗಳಾದ ಎಸ್.ಎಸ್. ಉದಯಕುಮಾರ್, ಎಂ. ರಾಜು, ಜಗದೀಶ್ ಮಾತನವರ್, ಕೆ.ಎಸ್. ಸುಕುಮಾರ್, ಇ. ಪರಮೇಶ್ವರ, ಪ್ರದೀಪ್ ವಿ. ಎಲಿ, ಗಣೇಶ ಎಂ. ಅಂಗಡಿ, ಮಂಜೇಗೌಡ, ಮರಿಸ್ವಾಮಿ ಹಾಗೂ ನಿಕಟಪೂರ್ವ ಅಧ್ಯಕ್ಷರಾದ ಜೆ.ಆರ್. ವಾಸುದೇವ, ಮಾಜಿ ಅಧ್ಯಕ್ಷರುಗಳಾದ ಎ.ಅಶ್ವಥ್‌ನಾರಾಯಣ ಶೆಟ್ಟಿ, ಡಿ.ಎಂ. ಶಂಕರಪ್ಪ, ಹಾಗೂ ಇತರರು ಉಪಸ್ಥಿತರಿದ್ದರು.