ಶಿವಮೊಗ್ಗದಲ್ಲಿ ಲಾಕ್ ಡೌನ್ ನಿಂದ ಸಂಚಾರ ನಿರ್ಬಂಧವಿದ್ದರೂ ಕೂಡ ಕೆಲವು ಐಡಿ ಕಾರ್ಡ್ ಗಳನ್ನು ಹಿಡಿದುಕೊಂಡು ಅನಗತ್ಯವಾಗಿ ಸಂಚರಿಸುತ್ತಿದ್ದವರ ಸಂಖ್ಯೆ ಹೆಚ್ಚಾದ ಹಿನ್ನಲೆಯಲ್ಲಿ ಇಂದು ನಗರದಲ್ಲಿ ಪೊಲೀಸರು ಕಟ್ಟುನಿಟ್ಟಾದ ತಪಾಸಣೆ ನಡೆಸಿದರು. ತಪಾಸಣೆ ಸಂದರ್ಭದಲ್ಲಿ ಬ್ಯಾಂಕ್ ಐಡಿ ಕಾರ್ಡ್ ತೋರಿಸಿದ ಸಿಬ್ಬಂದಿಗೆ ನೀವು ಈಗ ಬ್ಯಾಂಕಿನಲ್ಲಿ ಇರಬೇಕಾಗಿತ್ತು ರಸ್ತೆಯಲ್ಲಿ ಏನು ಮಾಡುತ್ತಿದ್ದೀರಿ? ಎಂದು ಕೋಟೆ ಸರ್ಕಲ್ ಇನ್ಸ್ ಪೆಕ್ಟರ್ ಚಂದ್ರಶೇಖರ್ ಅವರು ತಾಕೀತು ಮಾಡಿದರು. ಹೀಗೆ ಐಡಿ ಕಾರ್ಡ್ ಮಿಸ್ ಯೂಸ್ ಮಾಡುತ್ತಿದ್ದವರಿಗೆ ದಂಡ ವಿಧಿಸಿದರು. ಸಿಮ್ಸ್ ನ ಐಡಿ ಕಾರ್ಡ್ ತೋರಿಸಿ ಹೆಂಡತಿ ಜೊತೆ ಹೊರಗೆ ಹೊರಟಿದ್ದ ವ್ಯಕ್ತಿಯೊಬ್ಬನಿಗೆ ಇದೇ ಸಮಯದಲ್ಲಿ ದಂಡ ವಿಧಿಸಿದರು . ವಿಡಿಯೋ ನೋಡಿ
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ
ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153