ಶಿವಮೊಗ್ಗದ ಕೇಂದ್ರೀಯ ವಿದ್ಯಾಲಯದ 3 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕೆವಿನ್ ಜೆ ಹೊನ್ನಳ್ಳಿ(ತಂದೆ ಜೋಸೆಫ್ ಆರ್ ಹೊನ್ನಳ್ಳಿ ಮತ್ತು ತಾಯಿ ಮಂಜುಳ ಜೋಸೆಫ್) ಇವರು ಪಂಜಾಬ್ ರಾಜ್ಯದ ಮೊಹಾಲಿಯಲ್ಲಿ ಏ.21 ರಿಂದ 24 ರವರೆಗೆ ನಡೆದ ರಾಷ್ಟ್ರಮಟ್ಟದ ಕ್ವಾಡ್ ಸ್ಕೇಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ರಿಂಕ್ 1 (200 ಮೀ) ರಲ್ಲಿ ಬಂಗಾರದ ಪದಕ, ರಿಂಕ್ 2(500 ಮೀ) ರಲ್ಲಿ ಬೆಳ್ಳಿ ಪದಕ ಮತ್ತು ರಿಂಕ್ 3(1000 ಮೀ) ರಲ್ಲಿ ಕಂಚಿನ ಪದಕ ಗಳಿಸಿ ಶಾಲೆಗೆ ಕೀರ್ತಿ ತಂದಿರುತ್ತಾರೆ ಎಂದು ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯರು ತಿಳಿಸಿದ್ದಾರೆ.

ಕೆವಿನ್‍ಗೆ ಈ ಸಾಧನೆಗೆ ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯರು , ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…