SANDALWOOD NEWS…
ಹೌದು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 charlie ಚಿತ್ರ 25 ದಿನ ಪೂರೈಸಿ 150ಕೋಟಿ ನಿರ್ಮಾಪಕರ ಗಲ್ಲ ಪೆಟ್ಟಿಗೆ ಸೇರಿದೆ. ಚಿತ್ರವು ಜೂನ್ 10ರಂದು ವಿಶ್ವದ್ಯಂತ ತೆರೆಕಂಡು ಭರ್ಜರಿ ಪ್ರದರ್ಶನವಾಗುತ್ತಿದೆ. ಚಿತ್ರದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಾಯಕ ನಟನಾಗಿ ಅಭಿನಯಿಸಿದ್ದು ನಾಯಕಿಯಾಗಿ ಸಂಗೀತ ಶೃಂಗೇರಿ ಅಭಿನಯಿಸಿದ್ದಾರೆ.
ಕಿರಣ್ ರಾಜ್ ರವರು ನಿರ್ದೇಶನ ಮಾಡಿದ್ದಾರೆ. ಗುಪ್ತಾ ಮತ್ತು ರಕ್ಷಿತ್ ಶೆಟ್ಟಿ ರವರ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಕರ್ನಾಟಕದ ಜೊತೆಗೆ ಬೇರೆ ರಾಜ್ಯ ದೇಶದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಚಿತ್ರದಲ್ಲಿ ಬಂದಂತಹ 5 ಪರ್ಸೆಂಟ್ ಹಣವನ್ನು ಪ್ರಾಣಿಗಳಿಗೆ ಮೀಸಲಿ ಇಡುವುದಾಗಿ ರಕ್ಷಿತ್ ಶೆಟ್ಟಿ ಘೋಷಣೆ ಮಾಡಿದ್ದಾರೆ.ಚಿತ್ರಕ್ಕೆ ಮುಂಬರುವ ದಿನದಲ್ಲಿ ರಾಜ್ಯ, ರಾಷ್ಟ್ರ ಪ್ರಶಸ್ತಿ ಬರಲಿ ಎಂದು ಅಭಿಮಾನಿಗಳ ನಿರೀಕ್ಷೆ ಆಗಿದೆ.