ರೋಟರಿ ಶಿವಮೊಗ್ಗದ ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ಹಲವಾರು ವರ್ಷಗಳಿಂದ ಜನ ಮನಗೆದ್ದಿರುವ ಮತ್ತು ಸೇವಾಮನೋಭಾವದಿಂದ ರೋಗಿಗಳಿಗೆ ಹೆಚ್ಚಿನ ಶುಲ್ಕ ತೆಗೆದುಕೊಳ್ಳದೆ ಅತ್ಯಂತ ಕಡಿಮೆ ಶುಲ್ಕದಲ್ಲಿ ರೋಗಿಗಳಿಗೆ ಅನುಕೂಲವಾಗುವಂತೆ ಸೇವೆಸಲ್ಲಿಸುತ್ತಾ ಬಂದಿರುವ  ಹೆಸರಾಂತ ಮತ್ತು ಹಿರಿಯ ಖ್ಯಾತ ವೈದ್ಯರಾದ
ಡಾ|| ಏನ್ ಎಲ್ ನಾಯಕ್ ರವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷರಾದ
ಮಂಜುನಾಥ್ ಕದಂ ಅವರು ಮಾತನಾಡುತ್ತಾ ಶಿವಮೊಗ್ಗ ಜಿಲ್ಲೆಯಲ್ಲಿ ಹೆಸರಂತ ವೈದ್ಯರಾದ
ಡಾ|| ಏನ್ ಎನ್ ನಾಯಕ್ ರವರು ಅತ್ಯಂತ ಹಿರಿಯರು  ಹಲವಾರು ವರ್ಷಗಳಿಂದ ಜನ ಸೇವೆಯಲ್ಲಿ ತೊಡಗಿಸಿಕೊಂಡಿರುವ ವೈದ್ಯರು ರೋಗಿಗಳಿಗೆ  ಅತ್ಯಂತ ಕಡಿಮೆ ದರದಲ್ಲಿ ಮಾತ್ರೆಗಳನ್ನು ಮತ್ತು ಶುಲ್ಕಗಳನ್ನು ತೆಗೆದುಕೊಳ್ಳುವ ವೈದ್ಯರು ಈ ವಯಸ್ಸಿನಲ್ಲೂ ಅತ್ಯಂತ ಕ್ರಿಯಾಶೀಲರಾಗಿ ಈಗಲೂ ರೋಗಿಗಳನ್ನು ನೋಡುತ್ತಿರುವುದು ನಮಗೆಲ್ಲಾ ಉತ್ಸಾಹ ತರುವಂತ ಮಾದರಿಯಾಗಿದ್ದಾರೆ. ಇವರಿಗೆ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯಿಂದ ವೈದ್ಯರ ದಿನಾಚರಣೆ ಅಂಗವಾಗಿ ಸನ್ಮಾನಿಸಿದ್ದು ಹೆಮ್ಮೆಯಾಗಿದೆ.
ಇದೇ ಸಂದರ್ಭದಲ್ಲಿ ರೋಟರಿ ಮಾಜಿ ಅಸಿಸ್ಟೆಂಟ್ ಗೌರ್ನರ್ ರೋ ವಿಜಯ್ ಕುಮಾರ್  ಜಿ ರವರು ಮಾತನಾಡುತ್ತಾ ನಾನು ನೋಡಿದ ಹಾಗೆ ಡಾಕ್ಟರ್ ಏನ್ ಎಲ್ ನಾಯಕ್  ರವರ ವೈದ್ಯಕೀಯ ಸೇವೆ ಮಾಡುತ್ತ ಬಂದಿರುವುದು ಶ್ಲಾಘನೀಯವಾದ ವಿಷಯವಾಗಿದೆ ಶಿವಮೊಗ್ಗ ಜಿಲ್ಲೆ ಗೆ ಹೆಸರುವಾಸಿಯಾದ ಹಿರಿಯ ವೈದ್ಯರು ಈಗಲೂ ಸೇವೆ ಸಲ್ಲಿಸುತ್ತಿರುವುದು ನಮ್ಮಗಳ ಪುಣ್ಯ ವಾಗಿದೆ ಅವರ ಸೇವೆಗೆ ನಾವುಗಳು ಚಿರಋಣಿ ಎಂದು ತಿಳಿಸಿದರು ಇದೇ ಸಂದರ್ಭದಲ್ಲಿ ರೋಟರಿ ಶಿವಮೊಗ್ಗ ಪೂರ್ವದ ಕಾರ್ಯದರ್ಶಿ ಸತೀಶ್ಚಂದ್ರ ರವರು ಉಪಸ್ಥಿತರಿದ್ದರು.