ಶಿವಮೊಗ್ಗ ಜಿಲ್ಲೆಯಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಳ್ಳಲಾದ ದೋಷಪೂರಿತ ಸೈಲೆನ್ಸರ್ (Defective Silencer) ಗಳನ್ನು ಮತ್ತು ಕರ್ಕಶ ಶಬ್ದವನ್ನುಂಟು ಮಾಡುವ ಹಾರ್ನ್ (Shrill Horns) ಗಳನ್ನು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ರವರ ನೇತೃತ್ವದಲ್ಲಿ ನಗರದ ಶಿವಪ್ಪ ನಾಯಕ ಸರ್ಕಲ್ ನಲ್ಲಿ 70 Defective Silencer ಮತ್ತು 30 Shrill Horns ಗಳನ್ನು ಬುಲ್ಡೋಸರ್ ಬಳಸಿ ನಾಶಪಡಿಸಲಾಯಿತು.
ಪೊಲೀಸ್ ಉಪಾಧೀಕ್ಷಕರು, ಭದ್ರಾವತಿ ಉಪ ವಿಭಾಗ ರವರ ಸಮ್ಮುಖದಲ್ಲಿ
ಭದ್ರಾವತಿಯ ಅಂಡರ್ ಬ್ರಿಡ್ಜ್ ಹತ್ತಿರ 135 Defective Silencer ಗಳನ್ನು,ಪೊಲೀಸ್ ಉಪಾಧೀಕ್ಷಕರು, ಸಾಗರ ಉಪ ವಿಭಾಗ ರವರ ಸಮ್ಮುಖದಲ್ಲಿ ಸಾಗರ ಟೌನ್ ಸೊರಬ ರಸ್ತೆಯ ಐತಪ್ಪ ವೃತ್ತದಲ್ಲಿ 14 Defective Silencer ಮತ್ತು 11 Shrill Horns ಗಳನ್ನು, ಪೊಲೀಸ್ ಉಪಾಧೀಕ್ಷಕರು, ಶಿಕಾರಿಪುರ ಉಪ ವಿಭಾಗ ರವರ ಸಮ್ಮುಖದಲ್ಲಿ ಶಿಕಾರಿಪುರ ಟೌನ್ ಅಂಬೇಡ್ಕರ್ ವೃತ್ತದಲ್ಲಿ 12 Defective Silencer ಗಳು ಸೇರಿ, ಶಿವಮೊಗ್ಗ ಜಿಲ್ಲೆಯಾದ್ಯಂತ ಒಟ್ಟು 231 Defective Silencer ಮತ್ತು 41 Shrill Horns ಗಳನ್ನು ನಾಶ ಪಡಿಸಲಾಯಿತು.
ಮುಂದಿನ ದಿನಗಳಲ್ಲಿ ಸಹ Defective Silencer ಮತ್ತು Shrill Horns ಗಳನ್ನು ಬಳಸುವ ಚಾಲಕ ಮಾಲೀಕರುಗಳ ವಿರುದ್ಧ ಇದೇ ರೀತಿಯ ಕಾರ್ಯಾಚರಣೆ ನಡೆಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಮಿಥುನ್ ಕುಮಾರ್ ರವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಡಿವೈಎಸ್ಪಿ ಬಾಲರಾಜ್ ಮತ್ತು ಸಂಚಾರಿ ಸಿಪಿಐ ಸಂತೋಷ್ ರವರು ಉಪಸ್ಥಿತರಿದ್ದರು.