ಕೇರಳದ ತೆಲಿಚೆರಿಯ ಮಾಹೇ ಸಭಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಶಿವಮೊಗ್ಗ ಭಾವನದ ಅಧ್ಯಕ್ಷರಾದ ಪುಷ್ಪ ಎಸ್. ಶೆಟ್ಟಿಯವರಿಗೆ ಶ್ರೇಷ್ಠ ಔಟ್ ಸ್ಟ್ಯಾಂಡಿಂಗ್ ಪ್ರೆಸಿಡೆಂಟ್ ಅವಾರ್ಡ್ ದೊರಕಿದೆ.

ಕಾರ್ಯದರ್ಶಿ ಸುರೇಖಾ ಮುರಳೀಧರ್‌ರವರಿಗೆ ಔಟ್ ಸ್ಟ್ಯಾಂಡಿಂಗ್ ಲೀಜನ್ ಆಫೀಸರ್ ಅವಾರ್ಡ್, ಮತ್ತು ಉಪಾಧ್ಯಕ್ಷೆ ಹೇಮಾ. ಎಮ್. ಅಪ್ಪಾಜಿಯವರಿಗೆ ಮೋಸ್ಟ್ ಔಟ್ ಸ್ಟ್ಯಾಂಡಿಂಗ್ ಮೆಂಬರ್ ಅವಾರ್ಡ್ ದೊರಕಿದೆ.

ಅಲ್ಲದೇ ಸಂಸ್ಥೆಯ ಒಂದು ವರ್ಷದ ಅತ್ತ್ಯುತ್ತಮ ಕೆಲಸ, ಕಾರ್ಯಕ್ರಮಗಳಿಗೆ, ಔಟ್ ಸ್ಟ್ಯಾಂಡಿಂಗ್ ಲೀಜನ್, ಔಟ್ ಸ್ಟ್ಯಾಂಡಿAಗ್ ಸ್ಪೆಷಲ್ ಕಮ್ಯುನಿಟಿ ಡೆವಲಪ್ಮೆಂಟ್ ಅವಾರ್ಡ್,ಔಟ್ ಸ್ಟ್ಯಾಂಡಿಂಗ್ ಪಬ್ಲಿಕ್ ಪಿ.ಆರ್.ಪ್ರೋಗ್ರಾಮ್,ಔಟ್ ಸ್ಟ್ಯಾಂಡಿಂಗ್ ನ್ಯಾಷನಲ್ ಪ್ರೋಗ್ರಾಮ್ ಅವಾರ್ಡ್,ಕಾಂಟೆಸ್ಟ್ ರೂಲ್ ವಿನ್ನರ್ ಅವಾರ್ಡ್, ವಿಶೇಷ ಸಿಲ್ವರ್ ಜ್ಯೂಬಿಲಿ ಟ್ರೋಫಿ ಮತ್ತು ವಿಶೇಷವಾದ ಕಮ್ಯುನಿಟಿ ಸರ್ವಿಸ್ ಟ್ರೋಫಿ.
ಈ ಎಲ್ಲಾ ಪುರಸ್ಕಾರಗಳು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಶಿವಮೊಗ್ಗ ಭಾವನಕ್ಕೆ ಎಲ್ಲಾ ಸದಸ್ಯರ ಪ್ರೋತ್ಸಾಹದಿಂದ ದೊರಕಿದೆ. ಎಲ್ಲಾ ಸದಸ್ಯರಿಗೂ ಅಧ್ಯಕ್ಷೆ ಪುಷ್ಪ ‍ಶೆಟ್ಟಿರವರು ಧನ್ಯವಾದಗಳನ್ನು ತಿಳಿಸಿದ್ದಾರೆ.

ವರದಿ ಪ್ರಜಾ ಶಕ್ತಿ…