ಸ್ವಾತಂತ್ರ್ಯ ಭಾರತಕ್ಕೆ ಶ್ರೇಷ್ಠ ಸಂವಿಧಾನ ರಚಿಸಿ ಅದನ್ನು ಅಂಗೀಕರಿಸಿ ವ್ಯವಸ್ಥಿತವಾಗಿ ಜಾರಿಗೊಳಿಸಿ ಅತ್ಯಂತ ಶಕ್ತಿಶಾಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಾಂದಿ ಹಾಡಿ ಇಂದಿಗೆ 75 ವರ್ಷ ಪೂರ್ಣಗೊಳಿಸಿದೆ.
ಚಾರಿತ್ರಿಕ ಘಟನೆಯ ಹಿನ್ನಲೆಯಲ್ಲಿ ಸಂಸತ್ತಿನ “ಸೆಂಟ್ರಲ್ ಹಾಲ್” ನಲ್ಲಿ ಹಮ್ಮಿಕೊಂಡಿದ್ದ “ಸಂವಿಧಾನ ದಿನ” ಆಚರಣೆಯಲ್ಲಿ ಸಂಸದ ಬಿ ವೈ ರಾಘವೇಂದ್ರ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಅವರು, ಶ್ರೀ ಸೋಮಣ್ಣ ಅವರು, ಸಂಸದರಾದ ಶ್ರೀ ಸುಧಾಕರ್ ಅವರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.