ಮಾಜಿ ಉಪಮುಖ್ಯಮಂತ್ರಿಗಳಾದ ಕೆಎಸ್ ಈಶ್ವರಪ್ಪನವರು ಅಯೋಧ್ಯ ಬಾಲ ರಾಮನ ಹಾಗೂ ಕಾಶಿ ವಿಶ್ವನಾಥನ ದೇವರ ದರ್ಶನ ಪಡೆಯಲು ವಿಶೇಷ ರೈಲಿನಲ್ಲಿ ಸುಮಾರು 1500 ಭಕ್ತಾದಿಗಳು ಮಹಾನಗರ ಪಾಲಿಕೆಯ ಮಾಜಿ ಸದಸ್ಯರು ಮುಖಂಡರು ಕಾರ್ಯಕರ್ತರು ಶಿವಮೊಗ್ಗದಿಂದ ಅಯೋಧ್ಯ ಗೆ ಪ್ರಯಾಣ ಬೆಳೆಸಿದ್ದರು.
ಕೆ ಎಸ್ ಈಶ್ವರಪ್ಪ ತಂಡವು ಸೋಮವಾರ ಅಯೋಧ್ಯಯಲ್ಲಿ ನೂತನವಾಗಿ ನಿರ್ಮಿಸಿದ ಪ್ರಭು ಶ್ರೀರಾಮಚಂದ್ರನ ದರ್ಶನ ಪಡೆದರು. ಈ ಸಂದರ್ಭದಲ್ಲಿ ರಾಮನಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸ್ಥಳೀಯ ದೇವಾಲಯಗಳಿಗೆ ಭೇಟಿ ನೀಡಿ ಕಾಶಿ ವಿಶ್ವನಾಥನನ್ನು ದರ್ಶನ ಪಡೆಯಲು ವಿಶೇಷ ತಂಡ ತೆರಳಿದರು.