ಶಿವಮೊಗ್ಗ ನಗರದ ಬಿಹೆಚ್ ರಸ್ತೆಯ ಕರ್ನಾಟಕ ಸಂಘ ಪಕ್ಕದ “ಮೇನ್ ಮಿಡ್ಲ್ ಸ್ಕೂಲ್” ಸರ್ಕಾರಿ ಪ್ರಧಾನ ಕನ್ನಡ ಮತ್ತು ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಬಾಲಕಿಯರ ಪ್ರೌಢಶಾಲೆ, ಉರ್ದು ಪ್ರೌಢಶಾಲೆ, ತಮಿಳು ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಆವರಣದಲ್ಲಿ ಇರುವ ಎಲ್ಲಾ ಶಾಲಾ ವಿದ್ಯಾರ್ಥಿಗಳ ಒಳಗೊಂಡಂತೆ ಅವರಿಗೆ ಅಗ್ನಿ ಅವಘಡ ಪ್ರಾತ್ಯಕ್ಷಿಕೆಯ ಅಣಕು ಪ್ರದರ್ಶನವನ್ನು ಶಿವಮೊಗ್ಗದ ಅಗ್ನಿ ಶಾಮಕ ದಳದ ಠಾಣಾಧಿಕಾರಿ ಶ್ರೀ ನರೇಂದ್ರ ರವರ ನೇತೃತ್ವದಲ್ಲಿ ಅಗ್ನಿ ಅವಘಡದ ಬಗ್ಗೆ ಅಣಕು ಪ್ರದರ್ಶನದ ಮೂಲಕ ಮಾಹಿತಿ ನೀಡಿದರು.
ಮುಖ್ಯವಾಗಿ ಮನೆಗಳಲ್ಲಿ ಅಡುಗೆ ಅನಿಲ ಸೋರಿಕೆಯಾದಾಗ ಯಾವ ರೀತಿಯ ಕ್ರಮ ಕೈಗೊಳ್ಳಬೇಕು. ಅಡುಗೆ ಅನಿಲದ ಒಲೆ ಮತ್ತು ಸಿಲಿಂಡರ್ಗೆ ಕನಿಷ್ಟ 2.5 ಅಡಿ ಅಂತರವಿರಬೇಕು. ಮತ್ತು ಸಿಲಿಂಡರ್ ಕಾಲಾವಧಿ ಅದರ ತುದಿಯಲ್ಲಿ ಎ, ಬಿ.ಸಿ. ಡಿ ಎಂದು ಹಾಕಿ ಇಸವಿ ನಮೂದಿಸಿರುತ್ತಾರೆ. ಅದನ್ನು ತಿಳಿದುಕೊಳ್ಳಬೇಕು. ಆ ಇಸವಿಯ ಒಳಗೆ ಮಾತ್ರ ಅದನ್ನು ಬಳಸಬೇಕು. ಒಂದು ವೇಳೆ ಸರಬರಾಜುದಾರರು ಅವಧಿ ಮುಗಿದ ಸಿಲಿಂಡರ್ ಗಳನ್ನು ನೀಡಿದ್ದಲ್ಲಿ ನಿಮಗೆ ಅದರ ಅರಿವಿರಬೇಕು. ಕೂಡಲೇ ಅದನ್ನು ಹಿಂತಿರುಗಿಸಬೇಕು ಎಂದು ಮಾಹಿತಿ ನೀಡಿದರು.
ಪ್ರಮುಖವಾಗಿ ಶಾಲಾ ಕಾಲೇಜುಗಳು ಸಿನಿಮಾ ಮಂದಿರಗಳು, ಹಾಸ್ಟೆಲ್ಗಳು ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ಯಾವ ರೀತಿ ವರ್ತಿಸಬೇಕು ಎಂಬುದನ್ನು ತಿಳಿಸಿದ ಅವರು ಕೂಡ 112ಗೆ ಕರೆ ಮಾಡಿದರೆ ಅಗ್ನಿಶಾಮಕ ದಳಕ್ಕೆ ಅವಘಡ ಸಂಭವಿಸಿದ ಸ್ಥಳದ ಲೋಕೇಷನ್ ಸಹಿತ ಮಾಹಿತಿ ಸಿಗುತ್ತದೆ ಎಂದರು.
ಅಗ್ನಿಶಾಮಕ ದಳದಲ್ಲಿ ಅತ್ಯಾಧುನಿಕ ಸಲಕರಣೆಗಳು ಮತ್ತು ನುರಿತ ಸಿಬ್ಬಂದಿಗಳಿದ್ದಾರೆ. ನೀರು ಮತ್ತು ಅಗ್ನಿ ಅಪಘಾತಗಳು ಸೇರಿದಂತೆ ಯಾವುದೇ ತುರ್ತು ಸಂದರ್ಭದಲ್ಲಿ ಕಾರಾಚರಿಸಲು ಅಗ್ನಿಶಾಮಕ ದಳದಲ್ಲಿ ಎಲ್ಲಾ ರೀತಿಯ ಸೌಲಭ್ಯಗಳಿವೆ. ಇದರ ಅರಿವು ಪ್ರತಿಯೊಬ್ಬರಿಗೆ ಇರಬೇಕು. ಅವಘಡ ತಪ್ಪಿಸಲು ಸಹಕಾರಿಯಾಗುತ್ತದೆ ಎಂದರು.
ಬೆಂಕಿ ಹತ್ತಲು ಬೇಕಾಗುವ ತ್ರಿಕೋನದ ಮೂರು ವಸ್ತುಗಳು ಉರಿಯುವ ವಸ್ತು, ಗಾಳಿ ಮತ್ತು ಉಷ್ಣತೆ 3 ಸೇರಿದಾಗ ಬೆಂಕಿ ಹೆಚ್ಚಾಗುವುದು ಇವುಗಳ ಮೂರು ಬೇರ್ಪಡಿಸಿದಾಗ ತನ್ನಷ್ಟಕ್ಕೆ ತಾನೇ ಬೆಂಕಿ ನಿಲ್ಲುತ್ತದೆ. ಬೆಂಕಿಯನ್ನು ನಂದಿಸುವುದು ಮೂರು ವಿಧಾನ ತಣಸುವಿಕೆ, ಮುಚ್ಚುವಿಕೆ ಮತ್ತು ಉರಿಯುವ ವಸ್ತು ಬೇರ್ಪಡಿಸುವ ಮೂಲಕ ಬೆಂಕಿ ನಂದಿಸಬಹುದು
ಅಗ್ನಿ ಅವಘಡಗಳನ್ನು ನಾಲ್ಕು ರೀತಿ ವಿಂಗಡನೆ ಮಾಡಬಹುದು…
ಎ- ಕ್ಲಾಸ್ ಪೈರ್: ಉರಿದು ಬೂದಿಯಾಗುವ ವಸ್ತುಗಳು ಉದಾ: ಕಟ್ಟಿಗೆ, ಪೇಪರ್, ಇತರೆ
ಬಿ-ಕ್ಲಾಸ್ ಪೈರ್ ಆಯಿಲ್ ಪದಾರ್ಥಗಳು ಪೆಟ್ರೋಲ್, ಡೀಸೆಲ್, ಆಯಿಲ್, ಇತರೆ
ಸಿ-ಕ್ಲಾಸ್ ಪೈರ್ ಲಿಕ್ವೀಡ್ ಗ್ಯಾಸ್ ಪೈರ್
ಡಿ-ಕ್ಲಾಸ್ ಪೈರ್ ಮೆಟಲ್ ಫೈರ್ ಎಲೆಕ್ಟ್ರಿಕಲ್ ಫೇರ್, ಹಾಗೂ ಬೆಂಕಿ ಹತ್ತಿದಾಗ ಯಾವ ಯಾವ ನಂದಕಗಳನ್ನು ಯಾವ ರೀತಿ ಬಳಸುತ್ತೇವೆಂದು ಅಣಕು ಪ್ರದರ್ಶನದ ಮೂಲಕ ಎಲ್ಲಾ ಉಪಕರಣಗಳನ್ನು ಪ್ರದರ್ಶನದ ಮೂಲಕ ಶಾಲಾ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾರು ಎಸ್. ಜಯಂತ್ ಹಾಗೂ ಸರ್ಕಾರಿ ಶಾಲಾ, ಕಾಲೇಜು ಹಿತೈಷಿಗಳಾದ ಚನ್ನವೀರಪ್ಪ ಗಾಮನಗಟ್ಟಿ ಹಾಗೂ ಕಾಲೇಜಿನ ಅಧ್ಯಾಪಕರು, ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.