ಸಂಸ್ಕೃತ ಒಂದು ಅಗಾದವಾದ ಸಮುದ್ರವಿದ್ದಂತೆ ಸಂಸ್ಕೃತದಲ್ಲಿ ಅಪಾರ ಜ್ಞಾನ ಭಂಡಾರವಿದೆ ಎಂದು ಸಂಸ್ಕೃತ ಸ್ನಾತಕೋತ್ತರ
ಅಧ್ಯಯನ ಹಾಗೂ ಸಂಶೋಧನಾ
ವಿಭಾಗ ಕುವೆಂಪು ವಿ.ವಿ. ಇದರ ಅಧ್ಯಕ್ಷರಾದ ಡಾ.ಶೃತಕೀರ್ತಿ ತಿಳಿಸಿದರು.


ಅವರು ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಪ್ರಥಮ ವರ್ಷದ ಎಮ್.ಏ.ತರಗತಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳಿಂದ ಏರ್ಪಡಿಸಿದ್ದ
ಸ್ವಾಗತ ಕಾರ್ಯಕ್ರಮದಲ್ಲಿ
ಅಧ್ಯಕ್ಷತೆಯನ್ನು ವಹಿಸ ಮಾತನಾಡುತ್ತ ಹೇಳಿದರು.

ಉದ್ದೇಶವಿದ್ದು ಉದ್ದೇಶವಿಲ್ಲದೆಯೋ ಸಂಸ್ಕೃತವನ್ನು ಆಯ್ದುಕೊಂಡಿದ್ದೀರಿ ಆದರೆ ಇದೊಂದು ಮಹಾ ಸಮುದ್ರದ ಪ್ರವೇಶದಂತೆ ಇದೆ, ಇಲ್ಲಿ ಬಂದು ನೀವು ದಡದಲ್ಲಿ ಸಿಗುವ ಮರಳನ್ನು ಕಪ್ಪೆ ಚಿಪ್ಪುಗಳನ್ನೂ ಆಯ್ದುಕೊಳ್ಳಬಹುದು ಅಥವಾ ಒಳಗೆ ಇಳಿದು ಮುತ್ತು ರತ್ನಗಳನ್ನೂ ಆಯ್ದುಕೊಳ್ಳಬಹುದು ಅಷ್ಟು ಅವಕಾಶ ನಿಮಗೆ ಸಂಸ್ಕೃತ ಸಾಹಿತ್ಯದಲ್ಲಿ ಲಭ್ಯವಿದೆ ನಿಮ್ಮ ಆಯ್ಕೆಯ ಮೇಲೆ ಇವೆಲ್ಲವೂ ನಿರ್ಧಾರವಾಗುತ್ತದೆ ಹಾಗಾಗಿ ಸಂಸ್ಕೃತವೆಂಬ ಈ ಅಗಾಧ ಸಮುದ್ರದಲ್ಲಿ ನೀವು ಮುತ್ತು ರತ್ನ ಗಳನ್ನು ಆಯ್ದುಕೊಳ್ಳುವಂತಹ ವಿದ್ಯಾರ್ಥಿಗಳಾಗಿ ಎಂದು ನೂತನ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಸಂಸ್ಕೃತವನ್ನು ಕಲಿಯುವುದರಿಂದ ಹಲವು ರೀತಿಯ ಉಪಯೋಗಗಳಿವೆ ಮೊಟ್ಟಮೊದಲಾಗಿ ಉಚ್ಚಾರಣೆಗೆ ಇದು ಅತ್ಯಂತ ಪ್ರಯೋಜನಕಾರಿ ಮತ್ತು ಎಲ್ಲ ಶಾಸ್ತ್ರಗಳು ಸಂಸ್ಕೃತದ ಮೂಲವೇ ಆಗಿರುವುದರಿಂದ ನೀವು ಸಂಸ್ಕೃತವನ್ನು ಒಂದನ್ನು ಕಲಿಯುವುದರಿಂದ ಉಳಿದ ಎಲ್ಲವನ್ನು ಕಲಿಯಲು ಸುಲಭವಾಗುತ್ತದೆ.

ಭಾರತೀಯ ಸಂಪ್ರದಾಯದಂತೆ ಸಂಸ್ಕೃತ ಭಾಷೆಗೆ ಆದಿ ಮತ್ತು ಅಂತ್ಯವಿಲ್ಲ. ಇದು ಶಾಶ್ವತ. ಸ್ವಯಂ ಹುಟ್ಟಿದ ದೇವರು ಅದನ್ನು ಸೃಷ್ಟಿಸಿದ್ದಾನೆ. ಇದು ದೈವಿಕವಾಗಿದೆ. ಇದು ಶಾಶ್ವತ. ಇದನ್ನು ಮೊದಲು ವೇದಗಳಲ್ಲಿ ಬಳಸಲಾಯಿತು ಮತ್ತು ನಂತರ ಇದು ಇತರ ಕ್ಷೇತ್ರಗಳಲ್ಲಿ ಅಭಿವ್ಯಕ್ತಿಯ ಸಾಧನವಾಗಿದೆ.

ಸಂಸ್ಕೃತ ಸಾಹಿತ್ಯವು ಮಾನವ ಜೀವನದಷ್ಟೇ ವಿಸ್ತಾರವಾಗಿದೆ. ಪುರುಷಾರ್ಥಗಳು ಎಂದು ಕರೆಯಲ್ಪಡುವ ಮಾನವ ಜೀವನದ ನಾಲ್ಕು ಗುರಿಗಳಿವೆ. ಅವು ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ. ಧರ್ಮವು ಮನುಷ್ಯನ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ಪ್ರತಿನಿಧಿಸುತ್ತದೆ. ಅರ್ಥವು ವಿತ್ತೀಯ ಅವಶ್ಯಕತೆಗಳನ್ನು ತಿಳಿಸುತ್ತದೆ, ಕರ್ಮವು ಎಲ್ಲಾ ರೀತಿಯ ಮಾನವ ಆಸೆಗಳನ್ನು ಪ್ರತಿನಿಧಿಸುತ್ತದೆ ಮತ್ತು ಮೋಕ್ಷವು ಜನ್ಮ ಮತ್ತು ಮರುಹುಟ್ಟು ಮತ್ತು ಲೌಕಿಕ ಒಳಗೊಳ್ಳುವಿಕೆಯಿಂದ ಸ್ವಾತಂತ್ರ್ಯವಾಗಿದೆ. ಇಂತಹ ಸಾಹಿತ್ಯವನ್ನು ನೀಡಿದ ಸಂಸ್ಕೃತ ಇಂದು ವಿಶ್ವವ್ಯಾಪಿಯಾಗಿ ಬೆಳೆಯುತ್ತಿದೆ ಎಂದು ಹೇಳಿದರು.

ಹಿರಿಯ ವಿದ್ಯಾರ್ಥಿ ಅ.ನಾ.ವಿಜಯೇಂದ್ರ ರಾವ್, ಸ್ವಾಗತ ಮತ್ತು ಪ್ರಾಸ್ಥಾವಿಕ ಮಾಡಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ಕರುಗಳಾದ
ಡಾ.ಚೆನ್ನಕೇಶವ, ಡಾ.ಬಂಗಾರಮ್ಮ, ಡಾ.ಶೋಭ ಭಟ್ ನೂತನ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ಡಾ.ಚಿತ್ರಲೇಖ ವಂದಿಸಿದರು.

Leave a Reply

Your email address will not be published. Required fields are marked *