ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಫಿಟ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ವಿಶ್ವ ಸೈಕಲ್ ದಿನದಂದು ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಸೈಕಲ್ ಜಾಥಾ ನಡೆಯಿತು.

ಜಿಲ್ಲಾ ಪೊಲೀಸ್ ಕಛೇರಿ ಆವರಣದಲ್ಲಿ 01/06/2025ರ ಭಾನುವಾರ ಬೆಳಿಗ್ಗೆ ವಿಶ್ವ ಸೈಕಲ್ ದಿನಾಚರಣೆ ಅಂಗವಾಗಿ ಪೊಲೀಸ್ ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ರವರು ಸೈಕಲ್ ಜಾಥಾಕ್ಕೆ ಚಾಲನೆ ನೀಡಿದರು.

ಸೈಕಲ್ ಜಾಥಾವು ಶಿವಮೊಗ್ಗ ಎಸ್ಪಿ ಕಛೇರಿಯಿಂದ ಆರಂಭಗೊಂಡು ಬಿ.ಹೆಚ್.ರಸ್ತೆಯ ಅಶೋಕ ವೃತ್ತ, ಎಎವೃತ್ತ, ಶಿವಪ್ಪ ನಾಯಕ ವೃತ್ತ, ವಿಶ್ವೇಶ್ವರಯ್ಯ ವೃತ್ತ, ಶಂಕರಮಠ ವೃತ್ತ, ಸರ್ವಜ್ಞ ವೃತ್ತ, ಉಷಾ ನರ್ಸಿಂಗ್ ಹೋಂ ಅಕ್ಕಮಹಾದೇವಿ ವೃತ್ತ, ಲಕ್ಷ್ಮೀ ಟ್ಯಾಕೀಸ್, ಪೊಲೀಸ್ ಚೌಕಿ, ತರಕಾರಿ ಮಾರ್ಕೆಟ್ ಎಪಿಎಂಸಿ, ಆಲ್ಕೋಳ ವೃತ್ತ, ಐಬಿ ವೃತ್ತದ ಮೂಲಕ ಸ್ವಸ್ಥಾನಕ್ಕೆ ಬಂದು ಜಾಥಾ ಮುಕ್ತಾಯವಾಯಿತು.

ಜಾಥಾದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ಸಿಬ್ಬಂದಿಗಳು, ಗೃಹರಕ್ಷಕ ದಳದ ಸಿಬ್ಬಂದಿಗಳು, ಶಿವಮೊಗ್ಗ ಸೈಕಲ್ ಕ್ಲಬ್ ನವರು ಹಾಗೂ ಸಾರ್ವಜನಿಕರು ನೂರಕ್ಕೆ ಹೆಚ್ಚು ಸವಾರರು, ಈ ಜಾಥಾದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಡಿವೈಎಸ್ಪಿ ಸಂಜೀವ್ ಕುಮಾರ್, ಕೃಷ್ಣ ಮೂರ್ತಿ, ದೀಲಿಪ್, ಇನ್ಸ್ಪೆಕ್ಟರ್ ಸಿದ್ದೇಗೌಡ, ಟ್ರಾಫಿಕ್ ಸಬ್ ಇನ್ಸ್ಪೆಕ್ಟರ್ ತಿರುಮಲೇಶ್, ನವೀನ್ ಹಾಗೂ ಜಿಲ್ಲಾ ಗೃಹರಕ್ಷಕ ದಳದ ತರಭೇತಿ ಅಧಿಕಾರಿ ಹರೀಶ್ ಎಸ್ ಪಾಟೀಲ್, ಹಾಗೂ ಪೊಲೀಸ್ ಮತ್ತು ಗೃಹರಕ್ಷಕ ದಳದ ಸಿಬ್ಬಂದಿಗಳು, ಶಿವಮೊಗ್ಗ ಸೈಕಲ್ ಕ್ಲಬ್ ನವರು, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *