ಕರ್ನಾಟಕ ಜಾನಪದ ಅಕಾಡೆಮಿಯು 2024 ನೇ ಸಾಲಿನಲ್ಲಿ ದಿನಾಂಕ:01.01.2024 ರಿಂದ 31.12.2024ರವರೆಗೆ ಪ್ರಥಮ ಆವೃತ್ತಿಯಲ್ಲಿ ಮುದ್ರಣಗೊಂಡಿರುವ (ತಾಂತ್ರಿಕ ಹಾಗೂ ಪೂರ್ವಭಾವಿ ಪುಟಗಳನ್ನು ಹೊರತುಪಡಿಸಿ) ಕನಿಷ್ಟ 150 ಪುಟಗಳಿಗೂ ಮೇಲ್ಪಟ್ಟಿರುವಂತೆ, ಜನಪದ ಗದ್ಯ, ಜನಪದ ಪದ್ಯ ಪ್ರಕಾರ, ಜನಪದ ವಿಚಾರ-ವಿಮರ್ಶೆ- ಸಂಶೋಧನೆ ಹಾಗೂ ಜನಪದ ಸಂಕೀರ್ಣ ಈ ನಾಲ್ಕು ಪ್ರಕಾರಗಳ ಅತ್ಯುತ್ತಮ ಜಾನಪದ ಕೃತಿಗಳಿಗೆ ಬಹುಮಾನ ನೀಡುವ ಯೋಜನೆಯಡಿಯಲ್ಲಿ ಜಾನಪದ ಕೃತಿಗಳನ್ನು ಪುಸ್ತಕ ಬಹುಮಾನಕ್ಕಾಗಿ ಆಹ್ವಾನಿಸಿದೆ.


ಲೇಖಕರು/ ಪ್ರಕಾಶಕರು/ಸಂಪಾದಕರು ತಮ್ಮ 1 ಕೃತಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-560002 ಇವರಿಗೆ ಜೂನ್ 30 ರೊಳಗೆ ತಲುಪುವಂತೆ ಖುದ್ದಾಗಿ, ಕೊರಿಯರ್ ಅಥವಾ ಅಂಚೆ ಮೂಲಕ ಕಳುಹಿಸಿಕೊಡುವಂತೆ ಅಕಾಡೆಮಿಯ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಈ ಪುಸ್ತಕವು ತಜ್ಞರಿಂದ ಪ್ರಕಾರವಾರು ಆಯ್ಕೆಯಾದಲ್ಲಿ, ನಂತರ ಪುಸ್ತಕ ಬಹುಮಾನಕ್ಕೆ ಲೇಖಕರಿಂದ ಉಳಿದಂತೆ 03 ಪ್ರತಿಗಳನ್ನು ಮೌಲ್ಯಮಾಪಕರ ಪರಿಶೀಲನೆಗೆ ತರಿಸಿಕೊಳ್ಳಲಾಗುವುದು.

ವಿ.ಸೂ. ಈಗಾಗಲೇ ಪುಸ್ತಕ ಬಹುಮಾನ ಪಡೆದ ಸಂಪಾದಕರು / ಲೇಖಕರು ಮತ್ತೆ ಪುಸ್ತಕ ಬಹುಮಾನ ಯೋಜನೆಗೆ ಕೃತಿಗಳನ್ನು ಕಳುಹಿಸುವಂತಿಲ್ಲ.

Leave a Reply

Your email address will not be published. Required fields are marked *