ಕೃಷಿ ಇಲಾಖೆ ವತಿಯಿಂದ ನಗರದ ಗಾಂಧಿ ಬಜಾರ್ ನಲ್ಲಿ ಅಧಿಕೃತ ಪರವಾನಗಿ ಇಲ್ಲದೆ ಮಾರಾಟ ಮಾಡುತ್ತಿದ್ದ ಗೃಹಬಳಕೆ ಕೀಟನಾಶಕ ಅಂಗಡಿಯ ಮೇಲೆ ದಾಳಿ ಮಾಡಿದ್ದಾರೆ.
ಕೃಷಿ ಇಲಾಖೆ ಶಿವಮೊಗ್ಗ ಅಧಿಕಾರಿಗಳು ಗಾಂಧಿ ಬಜಾರ್ ನಲ್ಲಿರುವ ಅಂಗಡಿಗೆ ದಿಢೀರ್ ಭೇಟಿ ನೀಡಿ ಅಧಿಕೃತ ಪರವಾನಗಿ ಇಲ್ಲದೆ ಮಾರಾಟ ಮಾಡುತ್ತಿದ್ದ ಸುಮಾರು 64800 ಮೌಲ್ಯದ ಪವಳಂ ಸಂಸ್ಥೆಯ ಪವಳಂ ಇರುವೆ ಪುಡಿ (ಹೋಮ್ ಗಾರ್ಡ್) ಯನ್ನು ಜಪ್ತಿ ಮಾಡಿದರು.