ಮಂಜುನಾಥ್ ಶೆಟ್ಟಿ…
ಶಿವಮೊಗ್ಗ ನಗರದ ವಿಶಾಲ್ ಮಾರ್ಟ್ ನಲ್ಲಿ ಲಿಫ್ಟ್ ನಲ್ಲಿ ತಾಂತ್ರಿಕದೋಷ ಕಾಣಿಸಿಕೊಂಡು ಕೆಟ್ಟು ನಿಂತಿತ್ತು. ಕೆಟ್ಟನಿಂತ ಲಿಫ್ಟ್ ನಲ್ಲಿ 9 ಜನರು ಸಿಲುಕಿಕೊಂಡಿದ್ದು ಅವರನ್ನ ರಕ್ಷಣೆಯನ್ನ ಅಗ್ಮಿಶಾಮಕದಳದವರು ಮಾಡಿದ್ದಾರೆ.
ವಿಶಾಲ್ ಮಾರ್ಟ್ ನಲ್ಲಿ ಸೋಮವಾರ ಸಂಜೆ ಸುಮಾರು 8-15 ಗಂಟೆಯ ಹೊತ್ತಿಗೆ ಲಿಫ್ಟ್ ಚಲಿಸದೆ ಕೆಟ್ಟು ನಿಂತಿದೆ. ವಿದ್ಯುತ್ ಇದ್ದರೂ ಸಹ ತಾಂತ್ರಿಕ ದೋಷದ ಹಿನ್ನಲೆಯಲ್ಲಿ ಕೆಟ್ಟು ನಿಂತಿದೆ. ಲಿಫ್ಟ್ ನಲ್ಲಿದ್ದ ಸುಮಾರು 9 ಜನ ಕಂಗಾಲಾಗಿದ್ದಾರೆ.
9 ಗಂಟೆ ಹೊತ್ತಿಗೆ ಅಗ್ನಿಶಾಮಕ ದಳಕ್ಕೆ ಕರೆ ಹೋಗಿದೆ ತಕ್ಷಣವೇ ಸ್ಥಳಕ್ಕೆ ಬಂದ ಇಲಾಖೆಯವರು ಲಿಫ್ಟ್ ನಲ್ಲಿದ್ದ 9 ಜನರನ್ನೂ ರಕ್ಷಿಸಿದ್ದಾರೆ. ಇವರಲ್ಲಿ ಓರ್ವ ಮಹಿಳೆಗೆ ಸುಸ್ತು ಕಾಣಿಸಿಕೊಂಡರೂ ನಂತರ ಚೇತರಿಕೆ ಪಡೆದುಕೊಂಡು ಮನೆಗೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಲಿಫ್ಟ್ ನಲ್ಲಿದ್ದ ಇಬ್ಬರು ಮಕ್ಕಳು 7 ಜನ ದೊಡ್ಡವರನ್ನ ರಕ್ಷಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಆರ್ ಎಫ್ ಒ ರಾಜು, ಡಿಎಫ್ ಒ ಅಶೋಕ್ ಕುಮಾರ್, FSTO ಮುಕ್ತುಮ್ ಹುಸೇನ್, LF ಸುನೀಲ್, FD ಸತೀಶ್, FM ಸಂತೋಷ್ ಹಾಗೂ ಮನೋಜ್ ಭಾಗಿಯಾಗಿದ್ದರು.