ಮಂಜುನಾಥ್ ಶೆಟ್ಟಿ…

ಶಿವಮೊಗ್ಗ ಜಿಲ್ಲಾ ಔಷದಿ ವ್ಯಾಪಾರಿಗಳ ಸಂಘದ ವತಿಯಿಂದ ಪ್ರತಿಭಟನೆ ನಡೆಸಿದರು.ಆನ್ ಲೈನ್ ಮೂಲಕ ಔಷಧಿಗಳನ್ನು ವಿತರಿಸುವ ವ್ಯವಸ್ಥೆಯನ್ನು ನಿಲ್ಲಿಸುವಂತೆ ಆಗ್ರಹಿಸಿ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ತಮ್ಮ ಮೆಡಿಕಲ್ ಶಾಪ್ ಗಳನ್ನ ಬಂದ್ ಮಾಡಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟಿಸಿದ್ದಾರೆ.

ಅಧ್ಯಕ್ಷರಾದ ಎಸ್ ಪಿ ಮಧುಕರ್ ಶೆಟ್ಟಿ ಮಾತನಾಡಿ 2018 ಜಿಎಎಸ್ಆರ್ 817 ನಿಯಮದ ಅಡಿ ನಿಯಂತ್ರಣವಿಲ್ಲದ ಆನ್ ಲೈನ್ ಔಷಧ ಮಾರಾಟವನ್ನು ಸಂಘವು ತೀವ್ರವಾಗಿ ವಿರೋಧಿಸುತ್ತದೆ. ಔಷಧಿಗಳು ಸಾಮಾನ್ಯ ವಾಣಿಜ್ಯ ವಸ್ತುಗಳಲ್ಲ ಅವುಗಳಿಗೆ ಕಟ್ಟು ನಿಟ್ಟಿನ ನಿಯಂತ್ರಣ ಮತ್ತು ಜವಾಬ್ದಾರಿಯುತ ವಿತರಣೆ ಅಗತ್ಯವಿದೆ.ನಿಯಂತ್ರಣವಿಲ್ಲದ ಆನ್ ಲೈನ್ ಮಾರಾಟದಿಂದ ಷೆಡ್ಯೂಲ್ ಔಷಧಿಗಳ ದುರುಪಯೋಗ ಸ್ವಯಂ ಔಷದ ಸೇವನೆ ನಕಲಿ ಪ್ರಿಸ್ಕ್ರಿಪ್ಷನ್ ಗಳ ಬಳಕೆ ಸರಿಯಾದ ಸಂಗ್ರಹಣೆಯ ಕೊರತೆ ಹಾಗೂ ಆ ಸುರಕ್ಷಿತ ಔಷಧಿಗಳ ಹರಡುವಿಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಆತಂಕವನ್ನು ವ್ಯಕ್ತಪಡಿಸಿದರು.

ಕೆಮಿಸ್ಟ್ ಹಾಗೂ ಡ್ರಗ್ಗಿಸ್ಟ್ ಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದರು ಯಾವುದೇ ಪರಿಣಾಮಕಾರಿ ಪರಿಹಾರ ದೊರೆತಿಲ್ಲ ಹಾಗಾಗಿ ಜಿಎಸ್ಆರ್ 817 ದಿನಾಂಕ 20 ಎಂಟು 2018 ಜಿಎಸ್ಆರ್ 220 ದಿನಾಂಕ 26 ಮೂರು 2020 ಇವುಗಳನ್ನು ಹಿಂಪಡೆಯಬೇಕು ಔಷಧಿಗಳು ಜೀವ ರಕ್ಷಕ ವಸ್ತುಗಳು ಅವು ಸಾಮಾನ್ಯ ವ್ಯಾಪಾರಿ ಉತ್ಪನ್ನಗಳಲ್ಲ ರೋಗಿಗಳ ಸುರಕ್ಷತೆ ಮತ್ತು ಜವಾಬ್ದಾರಿಯುತ ಔಷಧ ವಿತರಣೆ ಯಾವಾಗಲೂ ಅತ್ಯುನ್ನತ ಆದ್ಯತೆ ಆಗಿರಬೇಕು ಎಂದು ಸಂಘ ಈ ವೇಳೆ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಎಸ್ಪಿ ಮಧುಕರ್ ಶೆಟ್ಟಿ ಕಾರ್ಯದರ್ಶಿ ವೆಂಕಟೇಶ್ ಈಜಿ ಉಪಾಧ್ಯಕ್ಷರಾದ ದತ್ತಾತ್ರೇಯ ಉಡುಪ ಕಾರ್ಯದರ್ಶಿ ಮಂಜುನಾಥ್ ಎಂಎಲ್ ಖಜಾಂಚಿಗಳಾದ ನಾಗರಾಜ್ ಕೆ ಸಿ. ನಿಕಟಪೂರ್ವ ಕಾರ್ಯದರ್ಶಿ ಚಂದ್ರಶೇಖರ್ ಹಾಗೂ ಮುಂತಾದವುರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *