ಮಂಜುನಾಥ್ ಶೆಟ್ಟಿ…

ಹೆಚ್ ಸಿ ಯೋಗೇಶ್ ರವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು.ತುಂಗಾ ಹೊಳೆ ಸೇತುವೆಯ ವಿಷಯವಾಗಿ ಶಿವಮೊಗ್ಗ ನಗರಕ್ಕೆ ಮಹಾದ್ವಾರವಾಗಿರುವ ತುಂಗಾ ನದಿ ಸೇತುವೆ ಸುಮಾರು ನೂರು ವರ್ಷಗಳಾಗಿದ್ದು ಈ ಒಂದು ಸೇತುವೆಗೆ ಅದರದೇ ಆದ ಇತಿಹಾಸವು ಇದೆ ಎಂದು ಅವರಿಗೆ ತಿಳಿಸಿದರು.

ಅಂದಿನ ಮಹಾರಾಜರುಗಳಿಂದ ಹಿಡಿದು ಈಗಲೂ ಸಹ ಸುಮಾರು ಕೋಟ್ಯಂತರ ಜನರು ಈ ಸೇತುವೆ ಮೇಲೆ ಪ್ರಯಾಣಿಸಿದ್ದಾರೆ.ಇದುವರೆಗೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದೆ ಅನಾಹುತಗಳು ಸಹ ಆಗಿರುವುದಿಲ್ಲ. ಶಿವಮೊಗ್ಗ ನಗರದಲ್ಲಿನ ತುಂಗಾ ಹೊಳೆಯನ್ನು ದಾಟಿ ಬೇರೆ ಬೇರೆ ನಗರಗಳಿಗೆ ಸಂಪರ್ಕ ಒದಗಿಸಿ ಪ್ರಯಾಣಿಸಲು ಅನುಕೂಲವಾಗಿದೆ.

ಮಳೆಗಾಲದಲ್ಲಿ ಬಾಗಿನ ಬಿಡುವುದು ಪೂಜೆಗಳನ್ನು ನೆರವೇರಿಸಿದ್ದು ಸಹ ಇದೆ. 2019ರ ಸಂದರ್ಭದಲ್ಲಿ ಆದಂತಹ ಭಾರಿ ಮಳೆಗೆ ಈ ಸೇತುವೆಗೆ ಬಹಳಷ್ಟು ಭಾಗ ತೊಂದರೆಯಾಗಿದ್ದು ತಾತ್ಕಾಲಿಕವಾಗಿ ಆ ಸಂದರ್ಭದಲ್ಲಿ ಸರ್ಕಾರದ ವತಿಯಿಂದ ಕಾಮಗಾರಿ ಮಾಡಿರುತ್ತಾರೆ. ಶಿವಮೊಗ್ಗದಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು ನೂತನ ಉದ್ಯಮಗಳು ಪ್ರಾರಂಭವಾಗಿದ್ದು ಜನರ ಹೋರಾಟವು ಹೆಚ್ಚಾಗಿರುವುದರಿಂದ ಪ್ರತಿನಿತ್ಯ ಈ ಸೇತುವೆ ಮೇಲೆ ಓಡಾಡಲು ತೊಂದರೆಯಾಗುತ್ತಿದೆ.

2026–27ನೇ ಸಾಲಿನಲ್ಲಿ ಸುಮಾರು 2,000 ಕೋಟಿ ರೂಪಾಯಿಗಳನ್ನು ರಾಜ್ಯಾದ್ಯಂತ ಸೇತುವೆಗಳ ನಿರ್ಮಾಣತೆಂದು ಇಟ್ಟಿರುವ ಹಣದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಸುಮಾರು 40 ಕೋಟಿ ರೂಪಾಯಿಗಳಷ್ಟು ವೆಚ್ಚವಾಗಲಿದ್ದು ಆದ್ದರಿಂದ ಈ ಹಣವನ್ನು ಬಿಡುಗಡೆಗೊಳಿಸಿ ತತ್ತಕ್ಷಣ ಈ ಕಾಮಗಾರಿಗೆ ಚಾಲನೆ ನೀಡಬೇಕಾಗಿ ಹಾಗೂ ಪ್ರಮುಖ ಆದ್ಯತೆಯನ್ನು ನೀಡಿ ಬಾರಿ ವಾಹನಗಳು ಈ ಸೇತುವೆಯಲ್ಲಿ ಓಡಾಡಲು ಸಾಧ್ಯವಾಗದೇ ಇರುವುದರಿಂದ ಬಹಳಷ್ಟು ತೊಂದರೆಯಾಗುತ್ತಿದ್ದು ಎಂದು ಪ್ರಸ್ತಾಪಿಸಿ ಮನವಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಎಸ್ ಶಿವಕುಮಾರ್ ಅವರು, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲೀಮ್ ಪಾಷಾ ರವರು, ಜಾಮಿಯಾ ಮಸೀದಿ ಅಧ್ಯಕ್ಷರಾದ ಮುನಾರ್ ಪಾಷರವರು, ಮಧುಸೂದನ್ ರವರು ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *