ಮಂಜುನಾಥ ಶೆಟ್ಟಿ…
ಸಂಚಾರಿ ಸಿಪಿಐ ದೇವರಾಜ್ ನೇತೃತ್ವದಲ್ಲಿ ಶಿವಮೊಗ್ಗ ನಗರದಲ್ಲಿ ಆಟೋ ಮೀಟರ್ ಹಾಕಲು ನಿರಾಕರಿಸಿದ 16 ಆಟೋ ಚಾಲಕರ ವಿರುದ್ಧ ಐಎಂವಿ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಾಯಿತು.
ಶಿವಮೊಗ್ಗ ನಗರದ ಪೂರ್ವ ಮತ್ತು ಪಶ್ಚಿಮ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯ ವಿವಿಧ ಆಟೋ ನಿಲ್ದಾಣಗಳಿಗೆ ಭೇಟಿ ನೀಡಿ, ಆಟೋ ಚಾಲಕರಿಗೆ ಪ್ರಯಾಣಿಕರನ್ನು ಕರೆದೊಯ್ಯುವ ಸಂದರ್ಭದಲ್ಲಿ ಕಡ್ಡಾಯವಾಗಿ ಆಟೋ ಮೀಟರ್ ಬಳಸುವಂತೆ ಹಾಗೂ ಮೀಟರ್‌ನಲ್ಲಿ ತೋರಿಸುವ ನಿಗದಿತ ದರದಂತೆ ಮಾತ್ರ ಬಾಡಿಗೆ ಪಡೆಯುವಂತೆ ಜಾಗೃತಿ ಮೂಡಿಸಲಾಯಿತು.
ಆಟೋ ಮೀಟರ್ ಬಳಸಲು ನಿರಾಕರಿಸಿದ ಹಾಗೂ ನಿಗದಿತ ಮೀಟರ್ ದರಕ್ಕಿಂತ ಹೆಚ್ಚಿನ ಬಾಡಿಗೆಗೆ ಬೇಡಿಕೆ ಇಟ್ಟ ಸುಮಾರು 16 ಆಟೋ ಚಾಲಕರ ವಿರುದ್ಧ ಐ.ಎಂ.ವಿ. ಕಾಯ್ದೆಯಡಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಯಿತು.
ಆಟೋ ಚಾಲಕರು ಸಂಚಾರ ನಿಯಮಗಳನ್ನು ಪಾಲಿಸಿ, ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಿ, ನಿಗದಿತ ದರದಲ್ಲಿಯೇ ಸೇವೆ ಒದಗಿಸುವಂತೆ ಸೂಚಿಸಲಾಯಿತು