ಮಂಜುನಾಥ್ ಶೆಟ್ಟಿ…

ಶಿವಮೊಗ್ಗ ಜಿಲ್ಲೆಯ ಇತಿಹಾಸ ಪ್ರಸಿದ್ಧ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಗೆ ಕ್ಷಣಗಣನೆ ಆರಂಭವಾಗಿದೆ. ಸೆ. ೨೫ರ ಅನಂತ ಪದ್ಮನಾಭ ವೃತದ ದಿನದಂದು ನಡೆಯುವ ವೈಭವದ ರಾಜಬೀದಿ ಉತ್ಸವಕ್ಕೆ ಎಲ್ಲಾ ರೀತಿಯ ಸಿದ್ಧತೆಗಳು ನಡೆದಿವೆ ಎಂದು ಹಿಂದೂ ಮಹಾಸಭಾ ಅಲಂಕಾರ ಸಮಿತಿ ತಿಳಿಸಿದೆ.

ನಗರದ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಮಹಾನ್ ವ್ಯಕ್ತಿಗಳ ಬ್ಯಾನರ್‌ಗಳು ರಾರಾಜಿಸುತ್ತಿವೆ. ವಿಸರ್ಜನಾ ಪೂರ್ವ ಮೆರವಣಿಗೆಯ ಹಿನ್ನೆಲೆಯಲ್ಲಿ ನಗರದಲ್ಲೇಡೆ ವಿಶೇಷ ಅಲಂಕಾರ ಮಾಡಲಾಗಿದೆ.

ಅಮೀರ್ ಅಹ್ಮದ್ ಸರ್ಕಲ್ ನಲ್ಲಿ ಸಿಂಹರೂಡ ಭವಾನಿ ದೇವಿ ಶಿವಾಜಿ ಮಹರಾಜರಿಗೆಗೆ ಖಡ್ಗವನ್ನು ದಯಪಾಲಿಸುತ್ತಿರುವ ಪ್ರತಿಕೃತಿ ಹಾಗೂ ಗಾಂಧಿಬಜರ್ ಮುಖ್ಯದ್ವಾರದಲ್ಲಿ ಪಂಚಮುಖಿ ಆಂಜನೇಯ ಹಾಗೂ ಒರಿಸ್ಸಾದ ರಥದ ಮಾದರಿಯ ಪ್ರತಿಗತಿಗಳನ್ನು ಅಳವಡಿಸಲಾಗಿದ್ದು ಸಾರ್ವಜನಿಕರ ಗಮನ ಸೆಳೆಯುತ್ತಿದೆ.

Leave a Reply

Your email address will not be published. Required fields are marked *