ಮಂಜುನಾಥ್ ಶೆಟ್ಟಿ…
ಶಿವಮೊಗ್ಗ ನಗರದಲ್ಲಿ ಎಸಿ ಡಾ.ಮೈತ್ರಿ ನೇತೃತ್ವದಲ್ಲಿ ಆಹಾರ ಸೇವನೆಯ ಹೋಟೆಲ್‌ಗಳು ಹಾಗೂ ಆಹಾರ ತಯಾರಿಕಾ ಘಟಕಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ತಪಾಸಣೆ ಮುಂದುವರೆದು ನಾಲ್ಕು ಸ್ಥಳಗಳಲ್ಲಿ ತಪಾಸಣೆ ನಡೆಸಲಾಗಿದೆ.
ನಗರದ ತಾಜ್ ಹೋಟೆಲ್ ಬ್ರೈಟ್ ಹೋಟೆಲ್ ಹೊಳೆಗೆ ಮನೆ ಲಕ್ಷ್ಮಿ ಕಾಂಡಿಮೆಂಟ್ಸ್ ಸೇರಿದಂತೆ ನಾಲ್ಕು ಸ್ಥಳಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಪಾಸಣೆ ವೇಳೆ ಕೆಲವು ಆಹಾರ ಪದಾರ್ಥಗಳನ್ನು ಸೂಕ್ತ ರೀತಿಯಲ್ಲಿ ಸಂಗ್ರಹಿಸದೇ ಇಟ್ಟಿರುವುದು ತಯಾರಿಸಿದ ಆಹಾರ ಪದಾರ್ಥಗಳಿಗೆ ಸರಿಯಾದ ಲೇಬಲ್ ಹಾಗೂ ತಯಾರಿಕೆ/ಅವಧಿ ದಿನಾಂಕ ನಮೂದಿಸದಿರುವುದು ಸೇರಿದಂತೆ ಹಲವು ನ್ಯೂನತೆಗಳು ಕಂಡುಬಂದಿವೆ.
ಕಿಚನ್ ನಲ್ಲಿ ಬಳಸುತ್ತಿದ್ದ ಅಡುಗೆ ಸೋಡದ ಪ್ಯಾಕೆಟ್ ಗಳಲ್ಲಿ ಕಂಪನಿಯ ಹೆಸರು ಎಕ್ಸ್ಪರಿ ಮಾಹಿತಿ ಇಲ್ಲದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.
ತಾಜ್ ಮತ್ತು ಬ್ರೈಟ್ ಹೋಟೆಲ್‌ಗಳಲ್ಲಿ ಕಂಡು ಬಂದ ನ್ಯೂನತೆಗಳ ಹಿನ್ನೆಲೆಯಲ್ಲಿ ತಕ್ಷಣಕ್ಕೆ ನೋಟಿಸ್ ನೀಡುವ ಬದಲು ಎಚ್ಚರಿಕೆ ನೀಡಿದ್ದಾರೆ.ಪತ್ತೆಯಾಗಿರುವ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು 15 ದಿನಗಳ ಕಾಲಾವಕಾಶ ನೀಡಲಾಗಿದೆ.ಈ ಅವಧಿಯಲ್ಲಿ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಆಹಾರ ಪರವಾಗಿ ರದ್ದುಗೊಳಿಸುವ ಎಚ್ಚರಿಕೆ ನೀಡಿದರು.